

ಶಿವಮೊಗ್ಗ: ರಾಜ್ಯ ಸರ್ಕಾರ ನೀಡಿದ್ದ ಪೊಲೀಸ್ ಎಸ್ಕಾರ್ಟ್ ಮತ್ತು ವಸತಿ ಭದ್ರತೆಯನ್ನು ಹಿಂಪಡೆದಿದ್ದು, ಅದನ್ನು ನಾನು ಪ್ರಶ್ನೆ ಮಾಡುವುದಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ರಾಜ್ಯ ಸರ್ಕಾರ ಆಗ ಭದ್ರತೆ ಕೊಟ್ಟಿತ್ತು. ಈಗ ಅದನ್ನು ವಾಪಸ್ ಪಡೆದಿದೆ. ಭದ್ರತೆ ನೀಡಿದಾಗ ನಾನು ಯಾಕೆ ಕೊಟ್ಟಿರಿ ಅಂತಾನೂ ಕೇಳಿಲ್ಲ, ಈಗ ಹಿಂಪಡೆದಾಗ ಯಾಕೆ ಹಿಂಪಡೆದಿದ್ದೀರಿ ಎಂಬುದರ ಬಗ್ಗೆಯೂ ಸರ್ಕಾರಕ್ಕೆ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.