ಕನ್ಹೇರಿ ಮಠದ ಶ್ರೀ ನಿರ್ಬಂಧಕ್ಕೆ ಈಶ್ವರಪ್ಪ ಆಕ್ಷೇಪ

K S Eshwarappa
Published on

ಶಿವಮೊಗ್ಗ: ಕನ್ಹೇರಿ ಮಠದ ಅದೃಶ್ಯ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ ಅವರನ್ನು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ರವೇಶ ನಿರ್ಬಂಧಕ್ಕೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿದರು.

ಅ.24ರಂದು ವಿಜಯಪುರಕ್ಕೆ ತೆರಳಿ ನಿರ್ಬಂಧ ಹಿಂಪಡೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು. ಸಿದ್ದೇಶ್ವರ ಸ್ವಾಮೀಜಿ ಬಳಿಕ ಆ ಭಾಗದಲ್ಲಿ ಯಾರಾದರೂ ಒಳ್ಳೆಯ ಕಾರ್ಯ ಮಾಡಿರುವ ಸ್ವಾಮೀಜಿಗಳಿದ್ದರೆ ಅದರಲ್ಲಿ ಕನ್ಹೇರಿ ಮಠದ ಶ್ರೀಗಳೂ ಒಬ್ಬರು. ಆದರೆ ರಾಜ್ಯ ಸರ್ಕಾರ ಸ್ವಾಮೀಜಿಯನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಜಿಲ್ಲೆ ಪ್ರವೇಶ ನಿರ್ಬಂಧವನ್ನು ತಕ್ಷಣ ರದ್ದುಪಡಿಸಬೇಕೆಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net