

ಶಿವಮೊಗ್ಗ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರಿಗೆ ಇನ್ನೂ ಕಾಲ ಮಿಂಚಿಲ್ಲ. ಅವರೂ ನಮ್ಮ ಜತೆ ಇರಬೇಕೆಂಬುದು ನಮ್ಮ ಆಸೆ. ಏನೇ ಸಮಸ್ಯೆ ಇದ್ದರೂ ದೆಹಲಿ ನಾಯಕರ ಜತೆ ಮಾತನಾಡಿ. ನಾವಂತೂ ನಿಮ್ಮ ಜತೆ ಇರುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಹಿರಿಯರು. ಪಕ್ಷ ಕಟ್ಟಲು ಅವರ ಪಾಲು ದೊಡ್ಡದಿದೆ. ಯಾವುದೋ ಪರಿಸ್ಥಿತಿ, ಸಂದರ್ಭ ಈ ಸನ್ನಿವೇಶಕ್ಕೆ ಅವರನ್ನು ದೂಡಿದೆ. ಮೋದಿ ಪ್ರಧಾನಿಯಾಗಲು ಪಕ್ಷದ ಹಿತದೃಷ್ಟಿಯಿಂದ ಅವರು ಕೈಜೋಡಿಸಬೇಕು. ಬಿ.ವೈ.ರಾಘವೇಂದ್ರ ಅವರ ಅಭಿವೃದ್ಧಿ ಬಗ್ಗೆ ಜನ ಮಾತನಾಡುತ್ತಿದ್ದು ರಾಘವೇಂದ್ರ ಅವರು ಈ ಬಾರಿ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.