ಈಶ್ವರಪ್ಪಗಿದೆ ಐಟಿ ಬೆದರಿಕೆ ಶೂಲ

kpcc spokeperson ayanur manjunath
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ
Published on

ಶಿವಮೊಗ್ಗ: ಬಿಜೆಪಿ ನಾಯಕರು ಮಾಜಿ ಸಚಿವ ಈಶ್ವರಪ್ಪ ಅವರಿಗೆ ಐಟಿ ಬೆದರಿಕೆಯ ಶೂಲವನ್ನು ಅವರಿಗೆ ಹಾಕಿದ್ದಾರೆ. ಅವರು ಹೇಳಿದಂತೆ ಕೇಳದೇ ಇದ್ದರೆ ದಾಳಿ ಆಗಲಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಹೇಳಿದರು.

ಭಯದ ಬಂದೂಕು ಅವರ ಬೆನ್ನ ಹಿಂದಿದೆ ಎಂಬುದು ಎಲ್ಲರಿಗೂ ಗೊತ್ತಾಗಿದ್ದು, ಮುಂದೆ ಈಶ್ವರಪ್ಪ ಅವರನ್ನು ಈಶಾನ್ಯದ ಯಾವುದೋ ಒಂದು ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡುತ್ತಾರೆ. ಅದೇ ಕಾರಣಕ್ಕೆ ಇಂತಹ ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದರು.
1989ರಲ್ಲಿ ಈಶ್ವರಪ್ಪ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧೆ ಮಾಡಿದಾಗ ನಾನು ಜನರನ್ನು ರಾಜಕೀಯವಾಗಿ ದಾರಿ ತಪ್ಪಿಸಿದ್ದೆ. ಶಿವಮೊಗ್ಗದ ಪುರಲೆ ಭಾಗದಲ್ಲಿ ಲಿಂಗಾಯತರ ಪ್ರಾಬಲ್ಯ ಹೆಚ್ಚಿತ್ತು. ಅದೇ ಕಾರಣಕ್ಕೆ ಈಶ್ವರಪ್ಪ ಅವರನ್ನು ನಾನು ಲಿಂಗಾಯತ ಎಂದೇ ಬಣ್ಣಿಸಿದ್ದೆ. ಆ ಕಾರಣಕ್ಕೆ ಆ ಚುನಾವಣೆಯಲ್ಲಿ ಈಶ್ವರಪ್ಪ 1,500 ಮತಗಳಿಂದ ಗೆದ್ದಿದ್ದರು. ಈಗ ಅದನ್ನು ಮರೆತಿದ್ದಾರೆ ಎಂದು ಹೇಳಿದರು.
ಅಂದು ಈಶ್ವರಪ್ಪ ಅವರಿಗೆ ಲಿಂಗಾಯತರ ಮುಖವಾಡ ಹಾಕಿದ್ದೆ. ಇಂದು ಹಿಂದುಳಿದ ವರ್ಗಗಳ ಮುಖವಾಡ ಹಾಕಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಹಣಿಯುವವರೂ ಇದ್ದಾರೆ. ಚುನಾವಣೆ ಬಳಿಕ ಅವರ ವರ್ಚಸ್ಸು ಕಡಿಮೆ ಆಗಬೇಕು. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಬೇಕು ಎಂಬುದು ಕೆಲವರ ಉದ್ದೇಶ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net