ಬಯಲಾಟ ಅಕಾಡೆಮಿ ಪ್ರಶಸ್ತಿಗೆ ಈಶ್ವರಪ್ಪ ಹಲಗಣಿ ಆಯ್ಕೆ

Eshwarappa Halagani selected for Bayalata Academy Award
ಕಲಾವಿದ ಈಶ್ವರಪ್ಪ ಹಲಗಣಿ
Published on

ಮಹಾಲಿಂಗಪುರ: ಶ್ರೀಕಷ್ಣ ಪಾರಿಜಾತ ಕಲಾವಿದ ಈಶ್ವರಪ್ಪ ಹಲಗಣಿ ಅವರು ಕರ್ನಾಟಕ ಬಯಲಾಟ ಅಕಾಡೆಮಿಯ 2024-25 ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಬಯಲಾಟ ಕಲಾಪ್ರಕಾರಗಳಿಗೆ ನೀಡಿರುವ ಅಮೂಲ್ಯ ಹಾಗೂ ಅನನ್ಯಕೊಡುಗೆ ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ. 50 ಸಾವಿರ ನಗದು, ಪ್ರಶಸ್ತಿ ಲಕ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತಿದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆಯ ರಜಿಸ್ಟ್ರಾರ್ ಕರ್ಣಕುಮಾರ ತಿಳಿಸಿದ್ದಾರೆ.

ಈಶ್ವರಪ್ಪ ಹಲಗಣಿ ಅವರು ಮಹಾಲಿಂಗಪುರದಲ್ಲಿ 1952 ರಲ್ಲಿ ಜನಿಸಿದರು. ತಂದೆ ಬಸಪ್ಪ ಹಾಗೂ ತಾಯಿ ಗಂಗವ್ವ.

ಮಹಾಲಿಂಗಪುರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ತಮ್ಮ ಮೂಲ ವತ್ತಿ ನೇಕಾರಿಕೆ ಯಲ್ಲಿ ತೊಡಗಿದ್ದರಿಂದ ಪ್ರೌಢ ಶಿಕ್ಷಣದಿಂದ ವಂಚಿತರಾದರು.ಶ್ರೀಕೃಷ್ಣ್ಣ ಪಾರಿಜಾತ ಕಲೆಗೆ ಆಕರ್ಷಿತರಾದ ಅವರು, ಆಗಿನ ಜನಪ್ರೀಯ ಪಾರಿಜಾತ ಕಲಾವಿದರಾದ ಮುರಿಗೆಪ್ಪ ಸೋರಗಾಂವಿ, ಅಪ್ಪಾಲಾಲ ಮದ್ದಿನ ಮತ್ತು ಪಂಡೀತ ಬಡಿಗೇರ ಅವರ ಬಳಿ ಪಾರಿಜಾತ ಕಲೆಯ ಮಾರ್ಗದರ್ಶನ ಪಡೆದುಕೊಂಡರು.

20 ನೇ ವಯಸ್ಸಿನಲ್ಲಿ ಕಲಾ ಸೇವೆಗೆ ಪ್ರವೇಶ ಮಾಡಿದಅವರು, 1972 ರಿಂದ ಕರ್ನಾಟಕ, ಮಹಾರಾಷ್ಟ್ರ, ವಿಶೇಷವಾಗಿ ಬೆಂಗಳೂರ ಸೇರಿದಂತೆ ಅನೇಕ ಕಡೆ ತಾಳವಾದಕರಾಗಿ ಭಾವಹಿಸಿದ ಕೀರ್ತಿಅವರಿಗೆ ಸಲ್ಲುತ್ತದೆ.

ಪ್ರಶಸ್ತಿ ಲಭಿಸಿದ್ದು ಸಂತಸ ತಂದಿದೆ. ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಮತ್ತು ಉತ್ಸವಗಳಲ್ಲಿ ನಾನು ನನ್ನ ಅಳಿಲು ಸೇವೆ ಸಲ್ಲಿಸುತ್ತಾ ಬಂದಿದಕ್ಕೆ ಗುರು ಮಹಾಲಿಂಗೇಶ್ವರ ನನ್ನ ಮೇಲೆ ಕಪೆ ತೋರಿ ಆಶಿರ್ವಾದ ಮಾಡಿದ್ದಾನೆ. -ಈಶ್ವರಪ್ಪ ಹಲಗಣಿ, ಶ್ರೀಕೃಷ್ಣ್ಣ ಪಾರಿಜಾತ ಕಲಾವಿದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net