

ಮೈಸೂರು: ಕಾಂತರಾಜು ವರದಿಯನ್ನು ಸುಟ್ಟುಹಾಕಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಆದರೆ ಅವರು ವಿಧಾನಸಭೆಯಲ್ಲಿ ಇದ್ದಾಗ ಆ ವರದಿಯ ಬಗ್ಗೆ ಮಾತನಾಡಿರಲ್ಲಿವಾ? ಈಗ ವಿರೋಧ ಮಾಡಿದರೆ ಏನು ಮಾಡಲು ಆಗುತ್ತದೆ? ಅವರ ಮಾತಿಗೆ ಬೆಲೆ ಇದೆಯೇ? ಈಶ್ವರಪ್ಪ ಸವಕಲು ನಾಣ್ಯವೆಂದು ಬಿಜೆಪಿಯಲ್ಲಿಯೇ ಅವರಿಗೆ ಟಿಕೆಟ್ ನೀಡಿಲ್ಲ ಎಂದು ಸಿಎಂ ವ್ಯಂಗ್ಯವಾಡಿದರು.
ಕಾಂತರಾಜು ವರದಿಯಲ್ಲಿ ಏನಿದೆ ಎನ್ನುವುದು ತಿಳಿದಿಲ್ಲ. ನವೆಂಬರ್ ಒಳಗೆ ವರದಿ ಕೊಡಬಹುದೇನೋ. ವರದಿ ಕೊಡಲಿ, ಆಮೇಲೆ ನೋಡೊಣ ಎಂದು ಪ್ರಶ್ನೆಗೆ ಉತ್ತರಿಸಿದರು.
ಕಲಬುರಗಿಯಲ್ಲಿ ಕೆಇಎ ಪರೀಕ್ಷೆಯಲ್ಲಿ ನಡೆದ ಅಕ್ರಮದ ಬಳಿಕ ಪರೀಕ್ಷೆಗೆ ಹಾಜರಾಗುವವರಿಗೆ ತಾಳಿ, ಓಲೆ ತೆಗೆಸುತ್ತಿರುವುದರ ಬಗ್ಗೆ ತಿಳಿದಿಲ್ಲ. ಗಣಿ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.