ದೇವರ ಮೂರ್ತಿ ಧ್ವಂಸ, ಕಿಡಿಗೇಡಿಗಳ ಗಡಿಪಾರಿಗೆ ಈಶ್ವರಪ್ಪ ಆಗ್ರಹ

K S Eshwarappa
Published on

ಶಿವಮೊಗ್ಗ: ದೇವರ ಮೂರ್ತಿಗಳನ್ನು ಧ್ವಂಸ ಅಥವಾ ವಿರೂಪಗೊಳಿಸುವ ಕಿಡಿಗೇಡಿಗಳನ್ನು ಗಡಿಪಾರು ಮಾಡುವಂತೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

ಭಾನುವಾರ ಬೆಳಗ್ಗೆ ರಾಗಿಗುಡ್ಡದ ಬಂಗಾರಪ್ಪ ಕಾಲನಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಕಿಡಿಗೇಡಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕು ಎಂದರು.

ನಾವು ಪೂಜೆ ಸಲ್ಲಿಸುತ್ತಿರುವ ದೇವರನ್ನು ಮುಸ್ಲಿಂ ಗೂಂಡಾಗಳು ಕಾಲಲ್ಲಿ ಒದ್ದಿದ್ದಾರೆ. ನಮ್ಮ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಿದ್ದಾರೆ. ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಮೂರು ಜಿಲ್ಲೆಗಳಿಗೆ ಕೋಮು ನಿಗ್ರಹ ಪಡೆಯನ್ನು ಸರ್ಕಾರ ಕೊಟ್ಟಿದೆ. ಆದರೆ ಆ ಪಡೆ ಏಕೆ ಸುಮ್ಮನಿದೆ ಎಂದು ಪ್ರಶ್ನಿಸಿದರು.

ಹಿಂದು, ಮುಸ್ಲಿಂ ಗಲಾಟೆ ಯಾವ ಕಾರಣಕ್ಕೆ ಆಗುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ. ಶಾಂತಿಯನ್ನು ಕದಡುವ ಕೆಲಸ ಮುಸ್ಲಿಂ ಗೂಂಡಗಳು ಮಾಡುತ್ತಿದ್ದಾರೆ. ನಾಲ್ಕು ತಿಂಗಳ ಹಿಂದೆ ಇಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದರು. ಅನಧಿಕೃತವಾಗಿ ಮನೆ ನಿರ್ಮಾಣ ಮಾಡುತ್ತಿರುವ ಗೂಂಡಾಗಳು ದೇವರ ಮೂರ್ತಿಯನ್ನು ಭಗ್ನಗೊಳಿಸಿ ಚರಂಡಿಗೆ ಎಸೆದಿದ್ದಾರೆ ಎಂದು ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯನವರೆ ಕೋಮು ಸೌಹಾರ್ದ ರೂಪಿಸುವುದು ಇದೆನಾ?, ಪರಿಶಿಷ್ಟರು ಕಷ್ಟಪಟ್ಟು ನಿರ್ಮಿಸಿದ ದೇವಸ್ಥಾನವಿದು. ಇದಕ್ಕೆ ಇಷ್ಟು ಅಪಮಾನ ಮಾಡಿದರೆ ಯಾಕೆ ಕ್ರಮ ಇಲ್ಲ. ಪ್ರಶ್ನೆ ಮಾಡಿದ ಮಹಿಳೆ ಮೇಲೆ ಕಿಡಿಗೇಡಿ ಏಕವಚನದಲ್ಲಿ ಮಾತನಾಡಿದ್ದಾನೆ. ನಾವು ಶಾಂತಿಯಾಗಿ ಇದ್ದೇವೆ. ಇಷ್ಟು ಆದ ಮೇಲೂ ಕ್ರಮ ಕೈಗೊಳ್ಳಲಿಲ್ಲ ಎಂದರೆ ಇನ್ಮುಂದೆ ಶಾಂತಿಯುತವಾಗಿ ಕೂರಲು ಸಾಧ್ಯವಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net