

ಶಿವಮೊಗ್ಗ: ಬಾಂಗ್ಲಾದೇಶದಲ್ಲಿ ಪ್ರಸ್ತುತ ನಡೆಯುತ್ತಿರುವುದನ್ನು ನೋಡಿದರೆ ಮುಸ್ಲಿಮರು ಅನ್ನ ತಿಂದ ಮನೆಗೆ ಕನ್ನ ಹಾಕುವವರು ಎಂಬುದು ಗೊತ್ತಾಗುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ವಾಗ್ದಾಳಿ ನಡೆಸಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಖಂಡಿಸಿ ಹಿಂದು ಹಿತರಕ್ಷಣಾ ಸಮಿತಿ ವತಿಯಿಂದ ನಡೆಸಲಾದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಈಶ್ವರಪ್ಪ, ಬಾಂಗ್ಲಾದೇಶಕ್ಕೆ ತಿನ್ನಲು ಅನ್ನ ಇರಲಿಲ್ಲ. ಚಿನ್ಮಯ್ ದಾಸ್ ಅವರು ಎಲ್ಲರಿಗೂ ಅನ್ನ ಹಾಕುತ್ತಿದ್ದರು. ಇದೀಗ ಅವರ ಮೇಲೆ ಕತ್ತಿ ಮಸೆಯುತ್ತಿದ್ದಾರೆ. ಚಿನ್ಮಯ್ ದಾಸ್ ಪರವಾಗಿ ಒಬ್ಬರು ವಕೀಲರು ವಕಾಲತ್ತು ಹಾಕಲು ಹೊರಟ್ಟಿದ್ದರು. ಮುಸ್ಲಿಮರು ಆ ವಕೀಲರ ಮೇಲೆ ಹಲ್ಲೆ ನಡೆಸಿದ್ದಾರೆ. ಆ ವಕೀಲರು ಸಾಯುವ ಸ್ಥಿತಿಯಲ್ಲಿ ಇದ್ದಾರೆ
ಭಾರತದ ಹಿಂದುಗಳು ಈ ದೇಶದ ಮುಸ್ಲಿಮರಿಗೆ ಸಿಕ್ಕ ಸಿಕ್ಕ ಕಡೆ ಹೊಡೆದರೆ ಮುಸ್ಲಿಮರು ಉಳಿಯುತ್ತಾರಾ. ಮುಸ್ಲಿಮರು ಹಿಂದು ಯುವತಿಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ. ಆದರೆ ಒಬ್ಬ ಹಿಂದು ಸಹ ಮಸೀದಿ ಧ್ವಂಸ ಮಾಡಲು ಹೋಗಿಲ್ಲ. ರಾಮಮಂದಿರ ನಿರ್ಮಾಣ ಮಾಡಲು ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ಬಿಟ್ಟರೆ ಬೇರೆ ಮಸೀದಿ ಧ್ವಂಸ ಮಾಡಿಲ್ಲ. ಹಿಂದೂಗಳು ಶಾಂತಿಪ್ರಿಯರು ಎಂದು ಹೇಳಿದ್ದಾರೆ.
ಬಾಂಗ್ಲದಲ್ಲಿ ಹಿಂದೂ ದೇವಸ್ಥಾನ ಧ್ವಂಸ ಮಾಡಿದ್ದಾರೆ. ಇದೇ ರೀತಿ ಮುಂದುವರೆದರೆ ಬಾಂಗ್ಲಾದೇಶ, ಪಾಕಿಸ್ತಾನ ಮುಂದೊಂದು ದಿನ ಇರಲ್ಲ. ಅದು ಅಖಂಡ ಭಾರತ ಆಗುತ್ತದೆ. ಇಂದು ಸಾಧು ಸಂತರು ಹೋರಾಟಕ್ಕೆ ಬಂದಿದ್ದಾರೆ. ಅಖಂಡ ಭಾರತದ ನಿರ್ಮಾಣಕ್ಕೆ ಸಾಧು ಸಂತರ ನೇತೃತ್ವ ಅವಶ್ಯಕತೆ ಇದೆ.
ಒಕ್ಕಲಿಗ ಮಠದ ಚಂದ್ರಶೇಖರ ಸ್ವಾಮೀಜಿ ಮುಸ್ಲಿಮರಿಗೆ ಮತದಾನದ ಹಕ್ಕು ಕೊಡಬಾರದು ಎಂದರು. ನಂತರ ತಮ್ಮ ಮಾತನ್ನು ವಾಪಸ್ ಪಡೆದಿದ್ದಾರೆ. ಹಿಂದು ದೇವಸ್ಥಾನ ಧ್ವಂಸ, ಹಿಂದುಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ ನಾವು ಸುಮ್ಮನಿದ್ದೇವೆ. ಬಾಂಗ್ಲಾದೇಶ ಸರ್ಕಾರದ ವಿರುದ್ದ ಎಲ್ಲರೂ ಒಗ್ಗಟ್ಟಾಗಬೇಕಿದೆ ಎಂದು ಮಾಜಿ ಸಚಿವ ಈಶ್ವರಪ್ಪ ಕರೆ ನೀಡಿದ್ಧಾರೆ.