ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ನೋಟಿಸ್ ನೀಡಿ ಶಾಕ್​ ಕೊಟ್ಟ ಜಿಲ್ಲಾಡಳಿತ

Eshwar
Published on

ಬೀದರ್: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಸಿಇಓ ಅವರಿಂದ ನೋಟಿಸ್ ಜಾರಿಯಾಗಿದೆ.

ವಸತಿ ಯೋಜನೆಯಡಿ ಫಲಾನುಭಾವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ನಡೆದಿರುವ ಹಿನ್ನಲೆಯಲ್ಲಿ ನೋಟಿಸ್​ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಭಾಲ್ಕಿಯಲ್ಲಿ 91 ಕೋಟಿ ರೂ. ಅಕ್ರಮ ನಡೆದಿದೆ‌ ಎಂಬ ಆರೋಪವಿದೆ. 9 ಸಾವಿರಕ್ಕೂ ಹೆಚ್ಚು ಮನೆಗಳು ಬೋಗಸ್ ಫಲಾನುಭಾವಿಗಳಿಗೆ ಆಯ್ಕೆ ಮಾಡಲಾಗಿದೆ ಎಂದು ಖುದ್ದು ರಾಜೀವ್ ಗಾಂಧಿ ವಸತಿ ನಿಗಮದ ಎಂ.ಡಿ ನೇತೃತ್ವದಲ್ಲಿ ನಡೆದ ತನಿಖೆಯಿಂದ ಪತ್ತೆಯಾದ ಹಿನ್ನೆಲೆಯಲ್ಲಿ ಶಾಸಕ ಖಂಡ್ರೆಗೆ ನೋಟಿಸ್ ಜಾರಿಯಾಗಿದೆ.

2015-16 ರಿಂದ 2018-19 ರವರೆಗೆ ಅನುಷ್ಠಾನಗೊಂಡ ಮನೆಗಳ ಆಯ್ಕೆಯಲ್ಲಿ ಭಾರಿ ಅಕ್ರಮ ಪತ್ತೆ ಹಚ್ಚಿದ ರಾಜೀವ ಗಾಂಧಿ ವಸತಿ ನಿಗಮದ ತಂಡ ತನಿಖೆ ನಡೆಸುವ ಮೂಲಕ ಅಕ್ರಮ ಬಯಲು ಮಾಡಿದ್ದಾರೆ.

ಖುದ್ದು ಶಾಸಕರ ಆಪ್ತ ಸಾಹಯಕರಾದ ಬಸವರಾಜ ಹಾಗೂ ಉಮೇಶ ಇಬ್ಬರು ಅವರ ಖಾಸಗಿ ಮೊಬೈಲ್ ಬಳಸಿ ಜತೆಗೆ ಶಾಸಕರ ಮನೆಯಿಂದ ಖಾಸಗಿ ಕಂಪ್ಯೂಟರ್​ಗಳನ್ನು ಬಳಕೆ ಮಾಡಿಕೊಂಡು ಜನರಿಗೆ ಮನೆ ಮಂಜೂರಾತಿ ಆದೇಶ ಪತ್ರವನ್ನು ನೀಡುವ ಮೂಲಕ ಭಾರಿ ಅಕ್ರಮ ಎಸಗಿರುವ ಬಗ್ಗೆ ತನಿಖೆಯಿಂದ ಬಯಲಾದ ಹಿನ್ನಲೆಯಲ್ಲಿ ಡಿ.ಸಿ ಹಾಗೂ ಸಿಇಓ ಸ್ಪಷ್ಟನೆ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net