ಅಪಾಯಕಾರಿ ಹೊಂಡಕ್ಕೆ ಮುಕ್ತಿ

Btw_dangerous pit
Published on

ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಿಂಗಳ ಹಿಂದೆ ಯಾರೋ ಅಗೆದು ಹಾಗೆಯೇ ಬಿಟ್ಟುಹೋದ ಹೊಂಡಕ್ಕೆ ಕೊನೆಗೂ ಮುಕ್ತಿ ದೊರಕಿದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದ ನಂತರ ಸತತ ದೂರು, ಮನವಿಗಳನ್ನು ನೀಡಿ, ಸ್ಥಳೀಯಾಡಳಿತದ ಗಮನ ಸೆಳೆಯಲಾಗಿತ್ತು.

ಶಾಲಾ ಮೈದಾನದ ಮಧ್ಯದಲ್ಲಿ ಡ್ರೈನೇಜ್ ನೀರು ಹಾದು ಹೋಗುವ ಪೈಪ್‌ಗಳಿಗೆ ಹಾನಿಯಾಗಿತ್ತು. ಪೈಪ್ ಹಾನಿಯಾಗಿ ಬೃಹತ್ ಹೊಂಡವಾಗಿರುವುದರಿಂದ ಶಾಲಾ ಮಕ್ಕಳು ಮೈದಾನಕ್ಕೆ ಆಟವಾಡಲು ಹಿಂಜರಿಯುತ್ತಿದ್ದರು. ಶಾಲಾಭಿವೃದ್ಧಿ ಸಮಿತಿ ವತಿಯಿಂದ ಪುರಸಭಾ ಸದಸ್ಯೆಯ ಮುಖಾಂತರ ಪುರಸಭೆಗೆ ಡ್ರೈನೇಜ್ ಪೈಪ್ ಹಾನಿಯಾದ ಬಗ್ಗೆ ದೂರು ನೀಡಲಾಗಿತ್ತು. ತಿಂಗಳ ಬಳಿಕ ಜ.17ಕ್ಕೆ ಮೈದಾನದಲ್ಲಿರುವ ಹೊಂಡವನ್ನು ಮುಚ್ಚಿಸಿ ಸಮಸ್ಯೆಯನ್ನು ಬಗೆಹರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net