ಸಮೀಕ್ಷೆಯ ಆರಂಭಿಕ ಹಂತದಲ್ಲೇ ದೋಷ: ಸಹಾಯವಾಣಿ ಸಂಖ್ಯೆ ನಾಟ್ ರಿಚಬಲ್

caste census
Published on

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಸೋಮವಾರದಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಆರಂಭಿಕ ಹಂತದಲ್ಲಿಯೇ ಹಲವು ದೋಷಗಳು ಕಂಡುಬಂದಿವೆ.

ಮೊದಲ ಹಂತದ ಸಮೀಕ್ಷೆಗೆ ಸಂಬಂಧಿಸಿದ ಪೂರ್ವಭಾವಿ ಕೆಲಸ, ಮನೆಪಟ್ಟಿ ಮತ್ತು ಅವುಗಳ ನಕ್ಷೆ ಸಿದ್ಧಪಡಿಸುವ ಕಾರ್ಯ ಒಳಗೊಂಡಿದೆ. ರಾಜ್ಯಾದ್ಯಂತ ಎಲ್ಲ ಮನೆಗಳ ಸಂಪೂರ್ಣ ಎಣಿಕೆ, ಅನು ಕ್ರಮಸಂಖ್ಯೆ ನೀಡುವಿಕೆ ಮತ್ತು ಮ್ಯಾಪಿಂಗ್ ಕೆಲಸ ಮಾಡಲಾಗುತ್ತಿದೆ. ಇಂಧನ ಇಲಾಖೆ ತಂಡ ಸಮೀಕ್ಷೆಗಾಗಿ ವಿದ್ಯುಚ್ಛಕ್ತಿ ಮೀಟರ್ ಸಂಪರ್ಕ (ಆರ್‌ಆರ್ ಸಂಖ್ಯೆ) ನೀಡಿದೆ. ಎಸ್ಕಾಂಗಳ ಮೀಟರ್ ರೀಡರ್‌ಗಳು ಅಪಾರ್ಟ್‌ಮೆಂಟ್, ವಾಸ ಸ್ಥಳಗಳ ಕ್ಲಸ್ಟರ್ ಸೇರಿ ಮನೆಗೆ ವಿಶಿಷ್ಟ ಸಂಖ್ಯೆ ನೀಡಿದ್ದಾರೆ.

ಆದರೆ, ಈ ಸ್ಟಿಕ್ಕರ್‌ನಲ್ಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ದೋಷ (ಎರರ್) ಬರುತ್ತಿದೆ. ಅಲ್ಲದೆ, ಸಮೀಕ್ಷೆ ಬಗ್ಗೆ ಇರುವ ಗೊಂದಲವನ್ನು ಬಗೆಹರಿಸಿಕೊಳ್ಳಲು ಸ್ಟಿಕ್ಕರ್‌ನಲ್ಲಿ ಕೊಟ್ಟಿರುವ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ಹಿಂದುಳಿದ ವರ್ಗಗಳ ಆಯೋಗದ ವೆಬ್‌ಸೈಟ್ ಕೂಡ ಓಪನ್ ಆಗುತ್ತಿಲ್ಲ.

ಆರ್‌ಆರ್ ಮೀಟರ್ ಆಧಾರದಲ್ಲಿ ಮನೆ ಗುರುತಿಸಿ ಸಮೀಕ್ಷೆ ಮಾಡುವುದರಿಂದ ಯಾವುದೇ ಮನೆಗಳು ಸಮೀಕ್ಷಾ ವ್ಯಾಪ್ತಿಯಿಂದ ತಪ್ಪಿ ಹೋಗಲ್ಲ.ಸಮೀಕ್ಷಾದಾರರಿಗೆ ಮನೆ ಗುರುತಿಸಲು ಸುಲಭವಾಗುತ್ತದೆ.

|ಮಧುಸೂಧನ್ ಆರ್.ನಾಯ್ಕ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net