ಈರಣ್ಣ ಅಧ್ಯಕ್ಷ, ಶಿವಪ್ಪ ಖಜಾಂಚಿ

18kittur3
Published on

ಚನ್ನಮ್ಮನ ಕಿತ್ತೂರು: ತಾಲೂಕಿನ ರಾಜ್ಯ ಸರ್ಕಾರಿ ನೌಕರರ ಸಂಕ್ಕೆ ಈಚೆಗೆ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯರಾಗಿ ಈರಣ್ಣ ಕರಡಿ, ಖಜಾಂಚಿಯಾಗಿ ಶಿವಪ್ಪ ಬೆಣಚಮರಡಿ ಹಾಗೂ ತಾಲೂಕು ಟಕದ ರಾಜ್ಯ ಪರಿಷತ್​ ಸ್ಥಾನಕ್ಕೆ ಪಂಡಿತ ಪಡೆನ್ನವರ ಆಯ್ಕೆಯಾಗಿದ್ದಾರೆ.

ತಾಲೂಕು ನೌಕರರ ಸಂದ 28ರಲ್ಲಿ 26 ನಿರ್ದೇಶಕರು ಮತ ಚಲಾಯಿಸಿದ್ದರು. ಅಧ್ಯ ಸ್ಥಾನಕ್ಕೆ ವಿ.ಎಸ್​. ನಂದಿಹಳ್ಳಿ, ಕೆ.ಜಿ. ಗಡಾದ, ವಿ.ಎಸ್​. ಬರಗಾಲಿ, ಆದಿನಾಥ ವನ್ನೂರ, ಈರಣ್ಣ ಕರಡಿ ಸ್ಪರ್ಧಿಸಿದ್ದರು. ಈರಣ್ಣ ಕರಡಿ ಹಾಗೂ ಆದಿನಾಥ ವನ್ನೂರ ಸಮವಾಗಿ 9 ಮತ ಪಡೆದ ಹಿನ್ನೆಲೆಯಲ್ಲಿ ಚೀಟಿ ಎತ್ತುವ ಆಯ್ಕೆ ಪ್ರಕ್ರಿಯೆ ಜರುಗಿತು. ಈ ವೇಳೆ ಈರಣ್ಣ ಕರಡಿಗೆ ಅಧ್ಯಕ್ಷ ಸ್ಥಾನ ಒಲಿಯಿತು. ರಾಜ್ಯಪರಿಷತ್​ ಸ್ಥಾನಕ್ಕೆ ಪಂಡಿತ ಪಡೆನ್ನವರ 14 ಮತ್ತು ಖಜಾಂಚಿ ಸ್ಥಾನಕ್ಕೆ ಶಿವಪ್ಪ ಬೆಣಚಮರಡಿ 15 ಮತ ಪಡೆದು ವಿಜಯಶಾಲಿಯಾದರು. ಡಿ.ಆರ್​. ಪಾಟೀಲ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net