

ಬಸವನಬಾಗೇವಾಡಿ: ಪಟ್ಟಣದಲ್ಲಿನ ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿಗೆ ಸತತ 3ನೇಯ ಬಾರಿ ಅಧ್ಯಕ್ಷರಾಗಿ ಈರಣ್ಣ ಪಟ್ಟಣಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಸಾಹೇಬಗೌಡ ಉತ್ನಾಳ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಚೇತನ ಬಾವಿಕಟ್ಟಿ ಘೋಷಣೆ ಮಾಡಿದರು.
ಬ್ಯಾಂಕಿನ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಅಂದಾಜು 20 ವರ್ಷಗಳಿಂದ ಬ್ಯಾಂಕಿನ ನಿರ್ದೇಶಕನಾಗಿ 3ನೇ ಅವಧಿಗೆ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ. ನಾನು ಅಧ್ಯಕ್ಷನಾಗಿ ಸೇವೆ ಮಾಡಲು ಸಹಕರಿಸಿದ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಎಲ್ಲ ಸಹಕಾರಿ ಮುಖಂಡರಿಗೆ ಧನ್ಯವಾದಗಳು. ಸಚಿವ ಶಿವಾನಂದ ಪಾಟೀಲರು ಹಾಗೂ ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಬ್ಯಾಂಕಿನ ಚುನಾವಣೆ ವೇಳೆ ಸಚಿವರು ಹಾಗೂ ನನ್ನ ಮಧ್ಯೆ ಭಿನ್ನಾಭಿಪ್ರಾಯವಿದೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದರು. ಅದು ಸತ್ಯಕ್ಕೆ ದೂರವಾಗಿದೆ ಎಂದರು.
ರಾಜ್ಯ ವಿಮಾ ಸಹಕಾರಿ ಮಹಾಮಂಡಳದ ಅಧ್ಯಕ್ಷ ಶಿವನಗೌಡ ಬಿರಾದಾರ, ಟಿ.ಎ.ಪಿ.ಎಂ.ಎಸ್ ನಿರ್ದೇಶಕ ಸಚಿನಗೌಡ ಪಾಟೀಲ (ಕುದರಿ ಸಾಲವಾಡಗಿ), ಬಸವೇಶ್ವರ ಕೋ ಆಪ್ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ, ಬಿ.ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕ ಶೇಖರ ದಳವಾಯಿ, ಪಿ.ಎಲ್.ಡಿ ಬ್ಯಾಂಕಿನ ನಿರ್ದೇಶಕ ರಾಮನಗೌಡ ಪಾಟೀಲ, ಮಾಂತೇಶ ಅಡಿಗೊಂಡ ಮಾತನಾಡಿದರು. ಬಸವೇಶ್ವರ ಬ್ಯಾಂಕಿನ ಸಭಾಭವನದಲ್ಲಿ ಬುಧವಾರ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಟಿ.ಎ.ಪಿ.ಎಂ.ಎಸ್ ಅಧ್ಯಕ್ಷ ಶೇಖರಗೌಡ ಪಾಟೀಲ, ಪುರಸಭೆ ಸದಸ್ಯ ರವಿ ಪಟ್ಟಣಶೆಟ್ಟಿ, ಶೇಖರ ಗೊಳಸಂಗಿ, ಸುರೇಶಗೌಡ ಪಾಟೀಲ, ಬಸವರಾಜ ಗೊಳಸಂಗಿ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರಾದ ಅಣ್ಣುಗೌಡ ಬಿರಾದಾರ, ಗಿರೀಶ ಚಿಮ್ಮಲಗಿ, ಬಾಬು ಲಮಾಣಿ, ಬಸಪ್ಪ ರೆಡ್ಡಿ, ಶಂಕ್ರಮ್ಮ ಗೌಡರ, ಅಯ್ಯಪ್ಪ ನಂದಿಹಾಳ, ಸಿದ್ರಾಮಪ್ಪ ಎಮ್ಮಿ, ಉಮಾಬಾಯಿ ವಿವೇಕಿ, ಹುಚ್ಚಪ್ಪ ಬಾಟಿ, ದಯಾನಂದ ಹೆಬ್ಬಾಳ, ಬ್ಯಾಂಕಿನ ವ್ಯವಸ್ಥಾಪಕ ಎಸ್.ಬಿ. ಮಂತ್ರಿ ಉಪಸ್ಥಿತರಿದ್ದರು. ಬಸವೇಶ್ವರ ಕೋ ಆಪ್ ಬ್ಯಾಂಕಿನ ನಿರ್ದೇಶಕ ಶಂಕರಗೌಡ ಬಿರಾದಾರ ಸ್ವಾಗತಿಸಿದರು. ನ್ಯಾಯವಾದಿ ರವಿ ರಾಠೋಡ ನಿರೂಪಿಸಿದರು. ಎಂ.ಬಿ.ತೋಟದ ವಂದಿಸಿದರು.