

ಕಡೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ರೈತರ ಅನಕ್ಷರತೆ ನಿರ್ಮೂಲನೆ ಮಾಡಲು ಏಕಲ್ ಅಭಿಯಾನ ಹೆಚ್ಚು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಏಕಲ್ ಅಭಿಯಾನದ ತಾಲೂಕು ಘಟಕದ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.
ಪಟ್ಟಣದಲ್ಲಿ ಏಕಲ್ ಅಂಚಲ್ ಆಚಾರ್ಯಯರಿಗೆ ಪಠ್ಯ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು,ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಹಣ ನೀಡಿ ಮನೆ ಪಾಠಕ್ಕೆ ಹೋಗಲು ಆರ್ಥಿಕ ಬೈತನ್ಯ ಕಡಿಮೆ. ಅಂತಹ ವಿದ್ಯಾರ್ಥಿಗಳಿಗೆ ಮನೆಯಲ್ಲೇ ಪಾಠ ಮಾಡುವುದು, ರೈತರಿಗೆ ಕೃಷಿ ಬಗ್ಗೆ ಮಾಹಿತಿ ನೀಡುವುದು, ಹೆಣ್ಣುಮಕ್ಕಳಿಗೆ ಆರೋಗ್ಯ ಶಿಕ್ಷಣ ನೀಡುವುದು ಏಕಲ್ ಅಭಿಯಾನದ ಮುಖ್ಯ ಉದ್ದೇಶ. ಈ ಕಾರ್ಯಕ್ಕಾಗಿ ತರಬೇತುದಾರ ಸ್ವಯಂ ಸೇವಕರನ್ನು ಆಚಾರ್ಯರು ಎಂದು ನೇಮಿಸಲಾಗಿದೆ. ಸ್ವಯಂ ಪ್ರೇರಣೆಯಿಂದ ನೂರಕ್ಕೂ ಹೆಚ್ಚು ಆಚಾರ್ಯರು ತಾಲೂಕಿನಾದ್ಯಂತ ಜ್ಞಾನ ಪ್ರಸಾರದಲ್ಲಿ ತೊಡಗಿದ್ದಾರೆ. ಅಚಾರ್ಯರ ನಿಸ್ವಾರ್ಥ ಕಾರ್ಯಕ್ಕೆ ಪೂರಕವಾಗಿ ಪರಿಕರಗಳನ್ನು ನೀಡಲಾಗಿದೆ ಎಂದರು.
ಸಮಾಜದ ಎಲ್ಲ ವಿಭಾಗಗಳಲ್ಲಿ ಸಮಾನತೆಯೊಂದಿಗೆ ಗ್ರಾಮೀಣ ಅಭಿವೃದ್ಧಿಯ ದೃಷ್ಟಿ ಕೋನದಡಿ ಅನಕ್ಷರತೆ ನಿರ್ಮೂಲನೆ ಮಾಡಲು ಏಕಲ್ ಅಂದೋನ ಹೆಚ್ಚು ಕಾರ್ಯನಿರ್ವಹಿಸುತ್ತದೆ. ಪಂಚತಂತ್ರ ಮಾದರಿ ಶಿಕ್ಷಣದ ಮೂಲಕ ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳಿಗೆ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧ್ಯನತೆ ನೀಡಲಾಗುತ್ತಿದೆ ಎಂದರು.
ಏಕಲ್‌ಅಭಿಯಾನ ಪ್ರಮುಖ್ ಹಾಗೂ ಪ್ರಧಾನ ಆಚಾರ್ಯ ತಿಮ್ಮೇಗೌಡ, ಅಂಚಲ್ ಪ್ರಮುಖ್ ತರುಣ್ ಮತ್ತಿತರಿದ್ದರು.