ಬ್ಯಾಡಗಿಯಲ್ಲಿ 100 ಅಂಗವಿಕಲರಿಗೆ ಸಲಕರಣೆ ವಿತರಣೆ

Cycle Distribute in byadagi
Published on

ಬ್ಯಾಡಗಿ: ಅರ್ಹ ವಿಕಲಚೇತರನ್ನು ಗುರುತಿಸಿ ಸಾಧನ ಸಲಕರಣೆ ಸೇರಿದಂತೆ ತ್ರಿಚಕ್ರ ಸೈಕಲ್ ವಿತರಿಸುವ ಮೂಲಕ ಅವರ ಬದುಕಿಗೆ ಸರ್ಕಾರ ನೆರವಾಗುತ್ತಿದೆ. ಪ್ರತಿಯೊಬ್ಬರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಇಲ್ಲಿನ ಕಲಾಭನವ ಆವರಣದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ಹಾಗೂ ಭಾರತೀಯ ರೈಲ್ವೆ ಹಣಕಾಸು ನಿಗಮ ಮತ್ತು ಅಲಿಮ್ಕೋ, ತಾಲೂಕು ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ 100 ವಿಕಲಚೇತನರಿಗೆ ವಿವಿಧ ಸಾಧನ ಸಲಕರಣೆ ವಿತರಿಸಿ ಅವರು ಮಾತನಾಡಿದರು.

ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಆಶ್ರಯ ಸಮಿತಿ ಅಧ್ಯಕ್ಷ ಮುನಾಫ್ ಏರೇಶಿಮಿ, ಸಮಿತಿ ಸದಸ್ಯರಾದ ಗಿರೀಶ ಇಂಡಿಮಠ, ಮಜೀದ್ ಮುಲ್ಲಾ, ದುರ್ಗೆಶ ಗೋಣೆಮ್ಮನವರ, ಹನುಮಂತ ಬೊಮ್ಮಲಾಪುರ, ನಜೀರ್ ಅಹ್ಮದ್​ಶೇಖ, ಶಂಕರ ಕುಸಗೂರು, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ, ಅಂಗವಿಕಲರ ತಾಲೂಕಾಧ್ಯಕ್ಷ ಪಾಂಡುರಂಗ ಸುತಾರ, ವಿವಿಧೋದ್ದೇಶ ಪುನರ್​ವಸತಿ ಕಾರ್ಯಕರ್ತ ನಾಗರಾಜ ಅಗಸನಹಳ್ಳಿ, ಚಂದ್ರಶೇಖರ ಮಳಿಮಠ, ಸರೋಜಾ ಮೂಡಿ, ಶಾಂತಾ ಪಟ್ಟಣಶೆಟ್ಟಿ, ಆರೀಫಾ ಅಮದುನವರ, ಪ್ರಕಾಶ ಡಿಸಲೆ, ನಿಂಗಪ್ಪ ಮರಳಿಹಳ್ಳಿ, ಸಿದ್ದಲಿಂಗಪ್ಪ ಬಡ್ಡಿಯವರ, ಶಿಕ್ಷಕ ಸುಭಾಸ ಗಡ್ಡದರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net