ಮಣ್ಣು-ನೀರಿನ ಸಂರಕ್ಷಣೆಗೆ ಒತ್ತು, ಸಹಾಯಕ ಕೃಷಿ ನಿರ್ದೆಶಕ ಜೀವನಸಾಬ ಕುಷ್ಟಗಿ ಹೇಳಿಕೆ

SABHE
ಹಟ್ಟಿ ಗ್ರಾಮದಲ್ಲಿ ಜಲಾನಯನ ಅಭಿವೃದ್ಧಿ ಯೋಜನೆಯಲ್ಲಿ ಸಮುದಾಯದ ಸಹಭಾಗಿತ್ವ ಹಾಗೂ ಗ್ರಾಮೀಣ ಮೌಲ್ಯಮಾಪನ ಸಭೆ ನಡೆಯಿತು. ಸಹಾಯಕ ಕೃಷಿ ನಿರ್ದೆಶಕ ಜೀವನಸಾಬ ಕುಷ್ಟಗಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಾಣೇಶ ಹಾದಿಮನಿ, ಎಒ ಪ್ರತಾಪಗೌಡ, ಎಎಒ ವೀರೇಶ ಇತರರಿದ್ದರು.
Published on

ಅಳವಂಡಿಳ: ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಅಂತರ್ಜಲ ಹೆಚ್ಚಿಸುವುದು ಜಲಾನಯನ ಯೋಜನೆಯ ಉದ್ದೇಶವಾಗಿದೆ ಎಂದು ಸಹಾಯಕ ಕೃಷಿ ನಿರ್ದೆಶಕ ಜೀವನಸಾಬ ಕುಷ್ಟಗಿ ಹೇಳಿದರು.

ಸಮೀಪದ ಹಟ್ಟಿ ಗ್ರಾಮದ ಶ್ರೀದುರ್ಗಾಂಬೆ ಲಕ್ಕಾಂಬೆ ದೇವಿ ದೇವಸ್ಥಾನ ಆವರಣದಲ್ಲಿ ಜಿಪಂ, ತಾಪಂ, ಕೃಷಿ ಇಲಾಖೆ, ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಯೋಜನೆ, ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಜಲಾನಯನ ಅಭಿವೃದ್ಧಿ ಯೋಜನೆ, ಕ್ಷೇತ್ರಮಟ್ಟದ ಸರ್ಕಾರೇತರ ಸಂಸ್ಥೆ ಸ್ವೋರ್ಡ್-ಕೆ-ಸಾಶ್ವಿಹಳ್ಳಿ ಇವುಗಳ ಆಶ್ರಯದಲ್ಲಿ ನಡೆದ ಜಲಾನಯನ ಅಭಿವೃದ್ಧಿ ಯೋಜನೆಯಲ್ಲಿ ಸಮುದಾಯದ ಸಹಭಾಗಿತ್ವ ಹಾಗೂ ಗ್ರಾಮೀಣ ಮೌಲ್ಯಮಾಪನ ಸಭೆ ಉದ್ದೇಶಿಸಿ ಶನಿವಾರ ಮಾತನಾಡಿದರು.

ಭೂ ಸಂಪನ್ಮೂಲ ತಂತ್ರಜ್ಞಾನದ ಮೂಲಕ ಭೂಮಿಯ ಸಾಮರ್ಥ್ಯ ವೃದ್ಧಿಗೊಳಿಸಲಾಗುವುದು ಹಾಗೂ ತೋಟಗಾರಿಕೆ, ಅರಣ್ಯ ಕೃಷಿ ಪದ್ಧತಿ ಮತ್ತು ಹಸಿರು ಹೊದಿಕೆಗಳನ್ನು ಹೆಚ್ಚಿಸಿ ರೈತರ ಆದಾಯ ದುಪ್ಪಟ್ಟು ಮಾಡಲಾಗುವುದು ಎಂದರು.

ಕೊಪ್ಪಳದ ಜಲಾನಯನ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಾಣೇಶ ಹಾದಿಮನಿ ಮಾತನಾಡಿ, ಭೂ ಸಂಪನ್ಮೂಲ ತಂತ್ರಜ್ಞಾನದಡಿ ಜಲಾನಯನ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸಿ, ಸಮುದಾಯ ಸಮಾಲೋಚನೆ ಮೂಲಕ ಸ್ಥಳ, ನಿರ್ದಿಷ್ಟ ಮಣ್ಣು ಮತ್ತು ನೀರು ಸಂರಕ್ಷಣಾ ಉಪಚಾರ ಕ್ರಮಗಳನ್ನು ಅಂತಿಮಗೊಳಿಸಿ ಸಮುದಾಯದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.

ಕೃಷಿ ಅಧಿಕಾರಿ ಪ್ರತಾಪ ನಂದನಗೌಡ್ರ, ಸಹಾಯಕ ಕೃಷಿ ಅಧಿಕಾರಿ ವೀರೇಶ ಪಟ್ಟೇದ, ಜಲಾನಯನ ಇಲಾಖೆ ಸಹಾಯಕರಾದ ವೆಂಕಟೇಶ ಹಳೇಮನಿ, ಬಸನಗೌಡ ಪಾಟೀಲ, ಸಂತೋಷ, ಗವಿಸಿದ್ದಪ್ಪ ಬಾರಕೇರ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net