ರಾಸಾಯನಿಕ ಬಳಕೆಯಿಂದ ಭೂಮಿ ಬರಡು

Training Programme
ಅಳವಂಡಿ ಸಮೀಪದ ಮತ್ತೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಪ್ರಮುಖರಾದ ಅಶೋಕ, ಕಮಲಾಕ್ಷಿ, ಚೈತ್ರಾ, ರಾಜೇಶ್ವರಿ, ಚಾಂದ್‌ಬೀ, ಉಮಾ, ಶಾರದಾ, ಗಾಯತ್ರಿ, ಸೇವಾ ಪ್ರತಿನಿಧಿಗಳಾದ ಚೇತನಾ, ಪಲ್ಲವಿ ಇತರರಿದ್ದರು.
Published on

ಅಳವಂಡಿ: ರೈತರು ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಹೆಚ್ಚು ಇಳುವರಿ ಬರಲಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಅಶೋಕ ತಿಳಿಸಿದರು.

ಸಮೀಪದ ಮತ್ತೂರು ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಭಾನುವಾರ ಆಯೋಜಿಸಿದ್ದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಮಣ್ಣು ಪರೀಕ್ಷೆ ಹಾಗೂ ಪೋಷಕಾಂಶಗಳ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರು ನೂತನ ತಾಂತ್ರಿಕತೆ ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡುವ ಜೊತೆಗೆ ಕೃಷಿ ಅಧ್ಯಯನ ಪ್ರವಾಸ, ಕೃಷಿ ಪಾತ್ಯಕ್ಷಿಕೆಗಳ ಭೇಟಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅಲ್ಪಾವಧಿ ಬೆಳೆಯ ಜೊತೆಗೆ ಅರಣ್ಯ ಕೃಷಿ, ತೋಟಗಾರಿಕೆಯ ದಾಳಿಂಬೆ, ನುಗ್ಗೆ, ಮಾವು, ನಿಂಬೆ ಮುಂತಾದ ಬೆಳೆಯನ್ನು ಬೆಳೆಯಬೇಕು. ಭೂಮಿಗೆ ಅತಿಯಾದ ರಾಸಾಯನಿಕ ಬಳಸಿ ಬೆಳೆಯನ್ನು ಬೆಳೆಯಲಾಗುತ್ತಿದ್ದು, ಮುಂದಿನ ದಿನಮಾನದಲ್ಲಿ ಭೂಮಿ ಬರಡಾಗುವ ಅಪಾಯ ಇದೆ ಎಂದರು.

ಸಂಪನ್ಮೂಲ ವ್ಯಕ್ತಿ ಶಿವಾನಂದಯ್ಯ ಮಾತನಾಡಿ, ಮಣ್ಣಿಗೂ ಕೂಡ ಜೀವ ಇದೆ. ಕಾರಣ ಭೂಮಿಗೆ ರಾಸಾಯನಿಕಗಳನ್ನು ಬಳಸದೆ ಹಸಿರೆಲೆ ಗೊಬ್ಬರ, ಸೆಗಣಿ ಗೊಬ್ಬರ ಮುಂತಾದ ಸಾವಯವ ಗೊಬ್ಬರ ಬಳಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net