ಇಕ್ವಿನಾಕ್ಸ್ ಅಂತರ್ ಕಾಲೇಜು ಸ್ಪರ್ಧೆ ಸಮಾರೋಪ

IMG_20231126_211042_750.jpg
Published on

ಕೇಂದ್ರಿಯ ವಿದ್ಯಾಲಯ ಕಾಲೇಜ್ ಚಾಂಪಿಯನ್
ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಕೆಎಲ್ಇ ಸಂಸ್ಥೆಯ ಕಾಲೇಜ್ ಆ್ ಬಿಜಿನೆಸ್ ಎಡ್ಮಿನಿಸ್ಟ್ರೆಶನ್ (ಸಿಬಿಎ) ವತಿಯಿಂದ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಇಕ್ವಿನಾಕ್ಸ್&23 ಅಂತರ್ ಕಾಲೇಜ್ ಸ್ಪರ್ಧೆಯಲ್ಲಿ ಕೇಂದ್ರಿಯ ವಿದ್ಯಾಲಯ ಪಿಯು ಕಾಲೇಜು ಜನರಲ್ ಚಾಂಪಿಯನ್ಶಿಪ್ ಪಡೆದುಕೊಂಡಿದೆ.

ಹುಬ್ಬಳ್ಳಿ ಧಾರವಾಡ ಹಾಗೂ ಸುತ್ತಮುತ್ತಲಿನ ಭಾಗದ ಪಿಯುಸಿ ಪ್ರಥಮ, ದ್ವೀತಿಯ ವರ್ಗದ ವಿದ್ಯಾಥಿರ್ಗಳು ಭಾಗವಹಿಸಿ ಸ್ಮಾಟಿರ್ಸ್ಟಿಕ್ಸ್, ಆಟಿರ್ಸ್ಟಿಕ್ಸ್ ಮತ್ತು ಸ್ಪೋಟಿರ್ಸ್ಟಿಕ್ಸ್ ಮೂರು ವಿಭಾಗಗಳಲ್ಲಿ ತಮ್ಮ ಪ್ರತಿಭೆ ಪ್ರದಶಿರ್ಸಿದರು.

ತಂಡಗಳ ಒಟ್ಟಾರೆ ಸಾಧನೆ ಮತ್ತು ಅಂಕಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಯಿತು. ರನ್ನರ್ ಅಪ್ ಜನರಲ್ ಚಾಂಪಿಯನ್ಶಿಪ್ ಅನ್ನು ಕೆಎಲ್ಇ ಪಿಯು ಕಾಲೇಜ್ ಆ್ ಕಾಮರ್ಸ್ ಪಡೆದುಕೊಂಡಿತು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೂ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಸೆಲೆಬ್ರಿಟಿ ಅತಿಥಿಯಾಗಿದ್ದ ನಟ ಯಶವಂತ ಕುಮಾರ ವಿದ್ಯಾಥಿರ್ಗಳಲ್ಲಿ ಹುಮ್ಮಸ್ಸು ತುಂಬಿದರು. ಇದೇ ಕಾಲೇಜಿನ ಹಳೆಯ ವಿದ್ಯಾಥಿರ್ಯೂ ಆಗಿರುವ ಯಶವಂತ ಹಿಂದಿ ಚಿತ್ರರಂಗದಲ್ಲಿ ನೃತ್ಯ ಸಂಯೋಜಕರಾಗಿ ಹೆಸರು ಮಾಡಿದ್ದಾರೆ. ಇವರಿಂದ ಪ್ರಮಾಣ ಪತ್ರ ಹಾಗೂ ಪ್ರಶಸ್ತಿ ಪಡೆದ ವಿದ್ಯಾಥಿರ್ಗಳು ಖುಷಿ ಹಂಚಿಕೊಂಡರು.

ಅವಳಿನಗರ ಹಾಗೂ ವಿವಿಧೆಡೆಯಿಂದ ಸುಮಾರು 300ಕ್ಕೂ ಹೆಚ್ಚು ವಿದ್ಯಾಥಿರ್ಗಳು ಭಾಗವಹಿಸಿ ಪ್ರತಿಭೆ ಅನಾವರಣ ಮಾಡಿದ್ದಾರೆ. ಇಕ್ವಿನಾಕ್ಸ್ ಅತ್ಯಂತ ಯಶಸ್ವಿಯಾಗಿ ನೆರವೇರಿತು ಎಂದು ಪ್ರಾಚಾರ್ಯ ಪ್ರೊ. ರಮಾಕಾಂತ ಡಿ. ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net