

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಕೆಎಲ್ಇ ಸಂಸ್ಥೆಯ ಕಾಲೇಜ್ ಆಫ್ ಬಿಜನೆಸ್ ಎಡ್ಮಿನಿಸ್ಟ್ರೆಶನ್ (ಸಿಬಿಎ) ವತಿಯಿಂದ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಇಕ್ವಿನಾಕ್ಸ್-23 ಅಂತರ್ ಕಾಲೇಜ್ ಸ್ಪರ್ಧೆಯನ್ನು ನವೆಂಬರ್ 24ರಿಂದ ಎರಡು ದಿನಗಳವರೆಗೆ ಆಯೋಜಿಸಲಾಗಿದೆ.
ಹುಬ್ಬಳ್ಳಿ ಧಾರವಾಡ ಹಾಗೂ ಸುತ್ತಮುತ್ತಲಿನ ಭಾಗದ ಪಿಯುಸಿ ಪ್ರಥಮ, ದ್ವೀತಿಯ ವರ್ಗದ ವಿದ್ಯಾಥಿರ್ಗಳು ಭಾಗವಹಿಸಲಿದ್ದಾರೆ.
ಇಕ್ವಿನಾಕ್ಸ್ ಸ್ಪರ್ಧೆಯು ಸ್ಮಾಟಿರ್ಸ್ಟಿಕ್ಸ್, ಆಟಿರ್ಸ್ಟಿಕ್ಸ್ ಮತ್ತು ಸ್ಪೋಟಿರ್ಸ್ಟಿಕ್ಸ್ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂತ್ಯದಲ್ಲಿ ತಂಡದ ಒಟ್ಟಾರೆ ಸಾಧನೆ ಮತ್ತು ಅಂಕಗಳನ್ನು ಪರಿಗಣಿಸಿ ಅತಿ ಹೆಚ್ಚು ಸ್ಕೋರ್ ಮಾಡಿದ ತಂಡಗಳಿಗೆ ಜನರಲ್ ಚಾಂಪಿಯನ್ಶಿಪ್ ಮತ್ತು ರನ್ನರ್ ಅಪ್ ಪ್ರಶಸ್ತಿ ನೀಡಲಾಗುತ್ತದೆ,
ಸೆಲೆಬ್ರಿಟಿ ಅತಿಥಿಯಾಗಿ ನಟ ಯಶವಂತ ಕುಮಾರ ಅವರನ್ನು ಆಹ್ವಾನಿಸಲಾಗಿದೆ. ಭಾರತೀಯ ಚಿತ್ರರಂಗದ ನಟ, ನೃತ್ಯ ಸಂಯೋಜಕರಾಗಿರುವ ಇವರು ಯಶವಂತ ಮಾಸ್ಟರ್ ಎಂದು ಜನಪ್ರಿಯರಾಗಿದ್ದಾರೆ.
ಯಶ್ ಡ್ಯಾನ್ಸ್ ಕಂಪನಿಯ ಸಂಸ್ಥಾಪಕರೂ ಆಗಿರುವ ಇವರು ಹಲವು ಶೋಗಳಲ್ಲಿ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದಿದ್ದಾರೆ. ಇವರು ಕೆಎಲ್ಇ ಸಿಬಿಎ ಅಲ್ಯುಮ್ನಿಯಾಗಿದ್ದು, ಅವರ ಇತ್ತೀಚಿನ ಚಿತ್ರದ ಟೀಸರ್ ಬಿಡುಗಡೆ ಸಹ ಇದೇ ಸಂದರ್ಭದಲ್ಲಿ ನಡೆಯಲಿದೆ.
ಇಕ್ವಿನಾಕ್ಸ್ ಸಮಾರೋಪ ನ. 25ರಂದು ಸಂಜೆ 5ಕ್ಕೆ ಜರುಗಲಿದೆ.