ಅಶ್ವಾರೂಢ ಬಸವೇಶ್ವರರ ಕಂಚಿನ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

261120 Lingasuguru Javuru Cross basaveshwara Statue Work
ಲಿಂಗಸುಗೂರು ತಾಲೂಕಿನ ಜಾವೂರ್ ಕ್ರಾಸ್ ಬಳಿ ಬಸವೇಶ್ವರರ ಕಂಚಿನ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಎಸ್.ಹೂಲಗೇರಿ ಗುರುವಾರ ಭೂಮಿಪೂಜೆ ನೆರವೇರಿಸಿದರು.
Published on

ಲಿಂಗಸುಗೂರು: ತಾಲೂಕಿನ ಬಸವಸಾಗರ ಜಲಾಶಯ ಮುಂಭಾಗದ ಜಾವೂರ್ ಕ್ರಾಸ್ ಬಳಿ ಅಶ್ವಾರೂಢ ಬಸವೇಶ್ವರರ ಕಂಚಿನ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಎಸ್.ಹೂಲಗೇರಿ ಗುರುವಾರ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿ, ಬಸವಸಾಗರ ಜಲಾಶಯ ನಿರ್ಮಾಣ ಹಂತದಿಂದ ಬಸವೇಶ್ವರ ಪ್ರತಿಮೆ ನಿರ್ಮಿಸುವ ಕುರಿತು ಈ ಭಾಗದ ಜನರ ಬಹುದಿನದ ಬೇಡಿಕೆ ಇದೀಗ ಕಾಲ ಸನ್ನಿಹಿತವಾಗಿದೆ. ಕೆಬಿಜೆಎನ್‌ಎಲ್ ಇಲಾಖೆ 1 ಕೋಟಿ ರೂ. ವೆಚ್ಚದಲ್ಲಿ ಪ್ರತಿಮೆ ನಿರ್ಮಿಸಲು ಟೆಂಡರ್ ನೀಡಿದ್ದು, 6 ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದರು.

ತಾಪಂ ಸದಸ್ಯ ಸೈಯದ್ ಖಾದ್ರಿ, ಮುಖಂಡರಾದ ಹೊನ್ನಪ್ಪ ಮೇಟಿ, ಗುಂಡಪ್ಪ ನಾಯಕ, ಪಾಮಯ್ಯ ಮುರಾರಿ, ಜೀವಲೆಪ್ಪ ನಾಯ್ಕ, ಲಿಂಗರಡ್ಡೆಪ್ಪ ನಾಡಗೌಡ, ಶಂಕರ ನಾಯ್ಕ, ಮಹಾಂತಣ್ಣ ನಾಡಗೌಡ, ರಾಘವೇಂದ್ರರಾವ್ ದೇಸಾಯಿ ಇತರರು ಇದ್ದರು.

ಬಸವಸಾಗರ ಜಲಾಶಯದ ಉದ್ಯಾನವನ ಪ್ರವಾಸಿ ತಾಣವನ್ನಾಗಿಸಲು ಸರ್ಕಾರದ ಮೇಲೆ ಒತ್ತಡ ಹಾಕಿದ್ದೇನೆ. ಬೇಡಿಕೆ ಶೀಘ್ರ ಈಡೇರುವ ವಿಶ್ವಾಸ ನನ್ನಲ್ಲಿದೆ. | ಡಿ.ಎಸ್.ಹೂಲಗೇರಿ, ಲಿಂಗಸುಗೂರು ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net