ಬಾಂಗ್ಲಾ ಮುಸ್ಲಿಂ ನುಸುಳುಕೋರರನ್ನು ಗಡಿಪಾರು ಮಾಡಲು ಮನವಿ

udp-12-srirama sene
Published on

ಉಡುಪಿ: ಭಾರತದ ನೆರೆಯ ದೇಶ ಬಾಂಗ್ಲಾದಲ್ಲಿ ಇತ್ತೀಚಿಗೆ ರಾಜಕೀಯ ಕ್ಷಿಪ್ರ ಕ್ರಾಂತಿಯಾಗಿ ಅರಾಜಕತೆ ಸೃಷ್ಟಿಯಾಗಿದ್ದು, ಅಲ್ಪ ಸಂಖ್ಯಾತರಾದ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ಹಾಗೂ ದಬ್ಬಾಳಿಕೆ ಮಾಡುತ್ತಿದ್ದು, ಬಾಂಗ್ಲಾ ವಲಸಿಗರು ಹಾಗೂ ರೋಹಿಂಗ್ಯಾ ಮುಸ್ಲಿಮರನ್ನು ಕೂಡಲೇ ಭಾರತದಿಂದ ಹಾಗೂ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಉಡುಪಿ ಜಿಲ್ಲಾ ಶ್ರೀರಾಮಸೇನೆ ವತಿಯಿಂದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯವರಿಗೆ ಮನವಿ ನೀಡಲಾಯಿತು.

ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಮಾತನಾಡಿ, ಬಾಂಗ್ಲಾ ದೇಶದಲ್ಲಿ 1971 ರಲ್ಲಿ ಶೇ. 21ರಷ್ಟು ಹಿಂದುಗಳಿದ್ದರು. ಈಗ ಹಿಂದುಗಳ ಸಂಖ್ಯೆ ಶೇ. 8ಕ್ಕೆ ಇಳಿಕೆಯಾಗಿದೆ. ಕರ್ನಾಟಕದಲ್ಲಿ ಅಕ್ರಮ ಬಾಂಗ್ಲಾ ಮುಸ್ಲಿಂ ಹಾಗೂ ರೋಹಿಂಗ್ಯಾ ಮುಸ್ಲಿಮರು 10 ಲಕ್ಷಕ್ಕೂ ಅಧಿಕ ಮಂದಿ ಅನಧಿಕೃತವಾಗಿ ನೆಲೆಸಿದ್ದಾರೆ ಎಂಬುದಾಗಿ ಅಂದಾಜಿಸಲಾಗಿದೆ. ಇವರನ್ನು ಜಿಲ್ಲೆಯಿಂದ ಹೊರಹಾಕುವುದು ಪೊಲೀಸ್​ ಇಲಾಖೆಯ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸುಧರ್ಶನ್​ ಪೂಜಾರಿ, ಶರತ್​ ಮಣಿಪಾಲ, ಸುಜಿತ್​ ನಿಟ್ಟೂರು, ವಿಕ್ರಂ ಕುಂದರ್​, ಸುದೀಪ್​ ನಿಟ್ಟೂರು, ಅರುಣ್​ ಕುರ್ಕಾಲು, ಮೋಹನ್​ ಪೂಜಾರಿ ಕಾಪು, ಸುರೇಶ್​ ಶೆಟ್ಟಿ ಶಿರ್ವ, ಸುಧೀರ್​ ಅಂಬಲಪಾಡಿ, ರಾಘವೇಂದ್ರ ಮಣಿಪಾಲ, ರಮೇಶ್​, ಪ್ರದಿಪ್​ ಅಂಬಲಪಾಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net