ಇಕ್ವಿನಾಕ್ಸ್ ಫೆಸ್ಟ್ ಗೆ ಚಾಲನೆ,ಟ್ರೋಫಿ ಅನಾವರಣ

IMG_20231124_110650_617-1.jpg
Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಕೆಎಲ್ಇ ಸಂಸ್ಥೆಯ ಬಿಬಿಎ ಕಾಲೇಜಿನಲ್ಲಿ ಪಿಯುಸಿ ವಿದ್ಯಾಥಿರ್ಗಳಿಗಾಗಿ ಎರಡು ದಿನಗಳವರೆಗೆ ಏರ್ಪಡಿಸಿರುವ ಇಕ್ವಿನಾಕ್ಸ್ ಅಂತರ್ ಕಾಲೇಜು ಫೆಸ್ಟಗೆ ಶುಕ್ರವಾರ ಚಾಲನೆ ನೀಡಲಾಯಿತು.

ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುತ್ತಿದೆ. ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು.

ಸ್ಮಾಟಿರ್ಸ್ಟಿಕ್ಸ್, ಆಟಿರ್ಸ್ಟಿಕ್ಸ್, ಸ್ಪೋಟಿರ್ಸ್ಟಿಕ್ಸ್ ವಿಭಾಗದಲ್ಲಿ ಸ್ಪರ್ಧೆಗಳು ಜರುಗಿದವು. ತಂಡದ ಒಟ್ಟಾರೆ ಸಾಧನೆ ಮತ್ತು ಅಂಕಗಳನ್ನು ಪರಿಗಣಿಸಿ ಜನರಲ್ ಚಾಂಪಿಯನ್ಶಿಪ್ ಮತ್ತು ರನ್ನರ್ ಅಪ್ ಜನರಲ್ ಚಾಂಪಿಯನ್ಶಿಪ್ ಪ್ರಶಸ್ತಿ ನೀಡಲಾಗುವುದು.

ಫಸ್ಟನಲ್ಲಿ ಅವಳಿನಗರದ ಸುಮಾರು 300ಕ್ಕೂ ಹೆಚ್ಚು ವಿದ್ಯಾಥಿರ್ಗಳು ಭಾಗವಹಿಸಿದ್ದರು, ವಿಜೇತರಿಗೆ ನೀಡುವ ಟ್ರೋಫಿಯನ್ನು ಶುಕ್ರವಾರ ಬೆಳಗ್ಗೆ ಕಾಲೇಜು ಆವರಣದಲ್ಲಿ ಅನಾವರಣಗೊಳಿಸಲಾಯಿತು.

ಬಿಬಿಎ ಕಾಲೇಜಿನ ಪ್ರಾಚಾರ್ಯ ಪ್ರೊ. ರಮಾಕಾಂತ ಡಿ, ಉಪನ್ಯಾಸಕರಾದ ಜಸ್ಲಿನ್, ಸ್ಮೀತಾ ಅವರು ಸಂಟನಾ ಸಮಿತಿಯ ನಿಕೇಶ, ಆರನ್, ವಿವಿಧ ಕಾಲೇಜುಗಳ ವಿದ್ಯಾಥಿರ್ಗಳು ಉಪಸ್ಥಿತರಿದ್ದರು.

ಶನಿವಾರ ಸಂಜೆ ಇಕ್ವಿನಾಕ್ಸ್ ಸಮಾರೋಪ ನಡೆಯಲಿದ್ದು, ಸೆಲೆಬ್ರಿಟಿ ಅತಿಥಿಯಾಗಿ ಹೆಸರಾಂತ ಕೋರಿಯೋಗ್ರಾಫರ್ ಯಶವಂತ ಮಾಸ್ಟರ್ ಭಾಗವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net