ಸಮಾನತೆ, ಕಾಯಕ, ದಾಸೋಹದ ನೆಲೆ ವಚನಸಾಹಿತ್ಯ

Untitled-1
ದೇವನಹಳ್ಳಿ ತಾಲೂಕು ವಿಜಯಪುರದಲ್ಲಿ ಅಖಿಲಕರ್ನಾಟಕ ಮಿತ್ರ ಸಂದ ವತಿಯಿಂದ ಆಯೋಜಿಸಿದ್ದ ಡಾ.ವಿಷ್ಣುವರ್ಧನ್​ ಜನ್ಮದಿನ ಅಮೃತಮಹೋತ್ಸವವನ್ನು ಶರಣ ಸಾಹಿತ್ಯ ಸಮ್ಮೇಳನಾಧ್ಯಕ್ಷ ವನಕಲ್ಲು ಸುೇತ್ರದ ಶ್ರೀ ಬಸವರಮಾನಂದ ಸ್ವಾಮೀಜಿ ಉದ್ಘಾಟಿಸಿದರು. ಗ್ರಾಮಾಂತರ ಜಿಲ್ಲಾ ಉತ್ಸವಾಧ್ಯಕ್ಷ ಹಾರಗದ್ದೆ ಆತ್ಮಾನಂದಗುರೂಜಿ, ಜಿಲ್ಲಾ ಸಹಕಾರಿ ಸಮ್ಮೇಳನಾಧ್ಯಕ್ಷ ವೆಂಕಟಾಪುರ ಲಕ್ಷ$್ಮಣ್​ ಇತರರು ಇದ್ದರು.
Published on

ವಿಜಯಪುರ : ವಚನಸಾಹಿತ್ಯವು ಸಮಾನತೆ, ಶ್ರಮಿಕ, ಕಾಯಕ, ದಾಸೋಹದ ನೆಲೆಯಾಗಿದ್ದು, ಧಾರ್ಮಿಕ, ಸಾಮಾಜಿಕ, ದಾರ್ಶನಿಕ ಚಿಂತನೆಗಳನ್ನು ಒಳಗೊಂಡಿವೆ. ಪುರುಷ ಮತ್ತು ಮಹಿಳೆಯ ನಡುವಿನ ಭೇದ, ಭಾವ ಪ್ರಶ್ನಿಸಿ ಶಿವಶರಣರಲ್ಲಿ ಸಮಾನತೆ ಸೃಜಿಸಿದರು ಎಂದು ವನಕಲ್ಲು ಸುೇತ್ರದ ಶ್ರೀ ಬಸವರಮಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಅಖಿಲಕರ್ನಾಟಕ ಮಿತ್ರ ಸಂದಿಂದ ಜಿಲ್ಲಾ ಕದಳಿವೇದಿಕೆ, ಜಿಲ್ಲಾ ಶರಣಸಾಹಿತ್ಯ ಪರಿಷತ್ತು, ರಾಷ್ಟ್ರೀಯಬಸವದಳ, ಅಕ್ಕನಬಳಗಗಳ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ, ಗ್ರಾಮಾಂತರ ಜಿಲ್ಲಾ ಉತ್ಸವ, ಜಿಲ್ಲಾ ಸಹಕಾರಿ ಸಮ್ಮೇಳನ, ಡಾ.ವಿಷ್ಣುವರ್ಧನ್​ ಜನ್ಮದಿನ ಅಮೃತ ಮಹೋತ್ಸವದಲ್ಲಿ ಮಾತನಾಡಿದರು.

ವಚನಗಳು ನೈತಿಕ ಜೀವನ ಮೌಲ್ಯ ಬೋಧಿಸುವ ಪ್ರಭಾವಿ ಮಾಧ್ಯಮ. ಕಾಯಕ ಮತ್ತು ದಾಸೋಹ ಸಿದ್ಧಾಂತಗಳ ಮೂಲಕ ಸಮಾಜೋತ್ಪನ್ನಗಳ ಸಮಪಾಲು, ಸಮಬಾಳು ಸಿದ್ಧಾಂತ ಮಂಡಿಸಬಲ್ಲ ಚಳವಳಿಯು ಭಾರತೀಯ ಸಂಸತಿಯಲ್ಲಿ ಪ್ರಮುಖವಾಗಿವೆ ಎಂದರು.

ಗ್ರಾಮಾಂತರ ಜಿಲ್ಲಾ ಉತ್ಸವಾಧ್ಯಕ್ಷ ಹಾರಗದ್ದೆ ಆತ್ಮಾನಂದಗುರೂಜಿ ದಂಡಪಾಣಿ ಮಾತನಾಡಿ, ಸಮಾಜದಲ್ಲಿ ಲೌಕಿಕದಲ್ಲಿದ್ದುಕೊಂಡೂ ಅಂಟಿಕೊಳ್ಳದಂತೆ ಜೀವನಸಾಗಿಸುವ ಗುಣವು ಎಲ್ಲರಲ್ಲಿಯೂ ಮನೆ ಮಾಡಬೇಕು. ಶೈವಿಕ ಪರಂಪರೆಗೆ ಸಾಕಷ್ಟು ಪುರಾತನವಿದ್ದು, ಆತ್ಮಸಾಾತ್ಕಾರ ಪಡೆಯುವ ಗುರಿ ಹೊಂದಿರಬೇಕು ಎಂದು ಹೇಳಿದರು.

ಜಿಲ್ಲಾ ಸಹಕಾರಿ ಸಮ್ಮೇಳನಾಧ್ಯಕ್ಷ ವೆಂಕಟಾಪುರ ಲಕ್ಷ$್ಮಣ್​, ಕದಳಿವೇದಿಕೆ ಜಿಲ್ಲಾಧ್ಯೆ ಬಿ.ಸ್ವರ್ಣಗೌರಿ ಮಹದೇವ್​ ಮಾತನಾಡಿದರು. ಅಖಿಲಕರ್ನಾಟಕ ಮಿತ್ರಸಂದ ಕಾರ್ಯದರ್ಶಿ ವಿ.ವಿಶ್ವನಾಥ್​, ಆರ್​.ಮುನಿರಾಜು, ಕೆ.ಎಚ್​.ಚಂದ್ರಶೇಖರ್​, ಎ.ಬಿ.ಪರಮೇಶ್​, ಶ್ರೀನಿವಾಸ್​, ಚಿದಾನಂದ ಬಿರಾದಾರ್​, ರಾಷ್ಟ್ರೀಯ ಬಸವದಳದ ಅಧ್ಯಕ್ಷ ಬೇಕರಿ ವಿ.ಶಿವಣ್ಣ, ಖಜಾಂಚಿ ಮ.ಜಯದೇವ್​, ಹೊಸಕೋಟೆ ಚೌಡೇಗೌಡ, ಡಾ.ವಿಷ್ಣುವರ್ಧನ್​ ಅಭಿಮಾನಿಗಳ ಸಂದ ಅಧ್ಯಕ್ಷ ಜಿ.ಎಂ.ಚಂದ್ರು, ಕರವೇ ಮಹೇಶ್​, ಜಿಲ್ಲಾ ಶಸಾಪ ಅಧ್ಯಕ್ಷ ಚಂದ್ರಶೇಖರ್​ ಹಡಪದ ಇದ್ದರು.

ಬೆಂಗಳೂರು ಜಿಲ್ಲೆಯು ಸಾಹಿತ್ಯ, ಸಂಸತಿ, ಶರಣಸಾಹಿತ್ಯ ಪ್ರಸಾರದಲ್ಲಿ ವಿಶೇಷತೆ ಹೊಂದಿದ್ದು, ಸಾಮಾಜಿಕ ಅಭಿವೃದ್ಧಿಯಲ್ಲಿ ಸಾಕಷ್ಟುಮಂದಿ ಕೀರ್ತಿಶೇಷರು ಸಾಕಷ್ಟು ಶ್ರಮಿಸಿದ್ದಾರೆ. ಅವರ ಹೆಸರಿನಲ್ಲಿ ವಿವಿಧ ೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ವಿತರಿಸಲಾಗುತ್ತಿದೆ. | ಚಿ.ಮಾ.ಸುಧಾಕರ್​ ಅಖಿಲ ಕರ್ನಾಟಕ ಮಿತ್ರಸಂದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net