

ಗಂಗಾವತಿ: ನಗರದ ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿ ತಾಲೂಕಾಡಳಿತ ಮತ್ತು ಹಡಪದ ಅಪ್ಪಣ್ಣ ಸಮಾಜ ಸಮಿತಿಯಿಂದ ಶಿವಶರಣ ಹಡಪದ ಅಪ್ಪಣ್ಣ ಅವರ 890ನೇ ಜಯಂತ್ಯುತ್ಸವ ಭಾನುವಾರ ಆಚರಿಸಲಾಯಿತು.
ಇದನ್ನೂ ಓದಿ: ಸಮಾನತೆಗೆ ದುಡಿದ ಶರಣ ಹಡಪದ ಅಪ್ಪಣ್ಣ
ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಶಿರಸ್ತೇದಾರ ರವಿಕುಮಾರ ನಾಯಕ್ವಾಡಿ ಮಾತನಾಡಿ, 12ನೇ ಶತಮಾನದಲ್ಲಿ ಹಡಪದ ಅಪ್ಪಣ್ಣನವರು ವಚನಗಳನ್ನು ರಚಿಸುವ ಮೂಲಕ ಸಮಸಮಾಜ ನಿರ್ಮಿಸಲು ಶ್ರಮಿಸಿದ ಅಗ್ರಗಣ್ಯರು ಎಂದರು.
ವಿಷಯ ನಿರ್ವಾಹಕ ಶ್ರೀರಾಮ, ತಾಲೂಕು ಅಧ್ಯಕ್ಷ ಹನುಮಂತಪ್ಪ ಸರಿಗಮ,ಕಾರ್ಯದರ್ಶಿ ಶಿವಣ್ಣ ನೀಲಕಮಲ, ಶರಣಪ್ಪ ಇತರರಿದ್ದರು.