ಸಮಾನತೆ ಸಾರಿದ ಶ್ರೇಷ್ಠ ಸಂತ ಕನಕದಾಸ

03 Raibag 2 phot-Web
ರಾಯಬಾಗದಲ್ಲಿ ತಾಲೂಕಾಡಳಿತದಿಂದ ಕನಕದಾಸರ ಜಯಂತಿ ಆಚರಿಸಲಾಯಿತು. ಶಾಸಕ ಐಹೊಳೆ, ಸದಾನಂದ ಹಳಿಂಗಳಿ, ಲಕ್ಷ್ಮಣ ಪೂಜೇರಿ, ಎಂ.ಎಸ್.ಮಗದುಮ್ಮ ಇತರರು ಇದ್ದರು.
Published on

ರಾಯಬಾಗ: ಪ್ರತಿಯೊಬ್ಬರೂ ಸಂತ ಶ್ರೇಷ್ಠ ಕನಕದಾಸರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಡಿ.ಎಂ.ಐಹೊಳೆ ಹೇಳಿದ್ದಾರೆ.

ಪಟ್ಟಣದ ಮಿನಿವಿಧಾನಸೌಧದ ಸಭಾಭವನದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಸಮಾರಂಭದಲ್ಲಿ ಮಾತನಾಡಿದರು. ಸಂಶೋಧಕ ಡಾ.ಮಧುಸೂದನ ಬೀಳಗಿ ಮಾತನಾಡಿ, ಕನಕ ದಾಸರ ಜೀವನವನ್ನು ವಿದ್ಯಾರ್ಥಿಗಳು ಆಳವಾಗಿ ಅಧ್ಯಯನ ಮಾಡಬೇಕು ಎಂದರು. ತಹಸೀಲ್ದಾರ್ ಎನ್.ಎಂ.ಗೆಜ್ಜಿ, ಬಿಇಒ ಪ್ರಭಾವತಿ ಪಾಟೀಲ, ಶಿವಪುತ್ರ ಹಾಡಕರ, ಭಗವಂತ ಬಂತೆ, ಹಾಲಪ್ಪ ಘಾಳಿ, ಎನ್.ಎಸ್.ಚೌಗಲಾ, ಬಿ.ಬಿ.ಮುಗಳಿ, ಮಹಾದೇವ ಶಿರಗೂರೆ, ಪರಮಾನಂದ ಮಂಗಸೂಳಿ, ಸದಾಶಿವ ಡಬ್ಬಗೋಳ,
ಆರ್.ಕೆ.ನಿಂಗನೂರೆ, ಎಚ್.ಎಲ್.ಪೂಜಾರಿ ಇದ್ದರು.

ಹಿಡಕಲ್ ಡ್ಯಾಂ ವರದಿ: ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹುಕ್ಕೇರಿ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ಹುಕ್ಕೇರಿ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಇವುಗಳ ಆಶ್ರಯದಲ್ಲಿ ಗ್ರಾಮದಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. ಮಕ್ಕಳ ಸಾಹಿತಿ ಎಸ್.ಎಂ.ಶಿರೂರ, ಹಿರಿಯ ಸಾಹಿತಿ ಕಾ.ಹೊ.ಶಿಂಧೆ, ಬಂಡೆಪ್ಪ ಮಾದರ, ಪ್ರಕಾಶ ಹೊಸಮನಿ, ಮಹಾವೀರ ತೆಳಗಡೆ, ಎಂ.ಬಿ.ಕಮತೆ, ಸದಾಶಿವ ಮಾಳ್ಯಾಗೋಳ, ವಿಜಯ ಮೇಲಗೇರಿ, ಶ್ರೀಕಾಂತ ಹರಿಜನ, ಸುರೇಶ ಹರಿಜನ, ಲಕ್ಷ್ಮಣ ಪೂಜೇರಿ, ಎಂ.ಎಸ್.ಮಗದುಮ್ಮ, ವೈ.ಎಸ್.ರಾಜಗೋಳಿ, ಸುರೇಶ ಪವಾರ, ಅರ್ಜುನ ನೇಸರಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net