

ಕೊಟ್ಟೂರು: ಡೋಣೂರು ಚಾನುಕೋಟಿ ಮಠ ಎಂದಿಗೂ ವರ್ಗ, ವರ್ಣ ಭೇದ ಎನ್ನದೆ, ಸಮಾನತೆ ತತ್ವ ಮತ್ತು ಕಾಳಜಿಯೊಂದಿಗೆ ಮುನ್ನಡೆಯುತ್ತಿದೆ ಎಂದು ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಪ್ರತಿಯೊಬ್ಬರಿಗೂ ಕೊಡುವ ಮನಸ್ಸಿದ್ದರೆ ಸಮಾನತೆ
ಚಾನುಕೋಟಿ ಮಠದ ಆಶ್ರಮದಲ್ಲಿ ಶ್ರೀ ಬಸವಲಿಂಗ ಶಿವಾಚಾರ್ಯ ಸ್ವಾಮಿಗಳ ಪುಣ್ಯಸ್ಮರಣೆ ಹಾಗೂ ಉಚಿತ ನೇತ್ರ ಪರೀಕ್ಷೆ, ಗುಬ್ಬಿ ತೋಟದಪ್ಪ ಗ್ರಂಥಾಲಯ, ಮಹಾದ್ವಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಾನುಕೋಟಿ ಮಠದ ಸದಾ ಹಿಂದುಳಿದ ಮತ್ತು ಶೋಷಿತ ವರ್ಗ ಹಾಗೂ ಅಲ್ಪಸಂಖ್ಯಾತ ಮಕ್ಕಳಿಗೆ ಶಿಕ್ಷಣ ದಾಸೋಹ ನೀಡುತ್ತಾ ಬಂದಿದ್ದು, ಈ ಅಂಶವೇ ಮಠದ ತತ್ವ ಸಿದ್ಧಾಂತವಾಗಿದೆ. ಮಠಕ್ಕೆ ಅಮೆರಿಕದಲ್ಲಿರುವ ಸ್ಮಿತಾ ಸತೀಶ ಸಾಲಂಕಿಮಠ ನೀಡಿರುವ ದಾನವನ್ನು ಸ್ಮರಿಸಿದರು.
ಕೂಡ್ಲಿಗಿ ಹಿರೇಮಠ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಡೋಣೂರು ಚಾನುಕೋಟಿ ಮಠದ ಪೀಠಾಧ್ಯಕ್ಷರಾದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಸದಾ ಸೀದಾ ವ್ಯಕ್ತಿತ್ವ, ಹಾಗೂ ಸಮಾಜ ಮುಖಿ ಚಿಂತನೆ ಉಳ್ಳವರಾಗಿರುವುದರಿಂದ ಮಠದ ಉಚಿತ ವಸತಿ ನಿಲಯದಲ್ಲಿ ಅಧಿಕ ಸಂಖ್ಯೆಯಲ್ಲಿ ಶೋಷಿತರು, ಅಲ್ಪ ಸಂಖ್ಯಾತ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು. ನಂತರ ಉಚಿತ ಕಣ್ಣು ಪರೀಕ್ಷೆ ನಡೆಯಿತು.