

ಅಳವಂಡಿ: ಗಣರಾಜ್ಯೋತ್ಸವ ಅಂಗವಾಗಿ ಇಲ್ಲಿನ ಗ್ರಾಪಂನಲ್ಲಿ ಭಾನುವಾರ ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ ಧ್ವಜಾರೋಹಣ ನೆರವೇರಿಸಿದರು.
ಮುದಕನಗೌಡ ಗಾಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಲ್ಲಪ್ಪ ಬಂಡಿ ಮಾತನಾಡಿ, ಪ್ರಜೆಗಳಿಂದ, ಪ್ರಜೆಗಳಿಗಾಗಿ ಇರುವ ಸರ್ಕಾರ ಒಂದು ನಿರ್ದಿಷ್ಟ ಕಾನೂನಿನಡಿ ಆಡಳಿತ ನಡೆಸಲು ಹಾಗೂ ಎಲ್ಲರಿಗೂ ಸಮಾನವಾಗಿ ಜೀವನ ನಡೆಸಲು ಸಂವಿಧಾನ ರಚಿಸಲಾಗಿದ್ದು, ಇದರ ಅನ್ವಯ ಸರ್ಕಾರ ನಡೆಸಲಾಗುತ್ತಿದೆ. ಭಾರತ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿದೆ ಎಂದರು.
ಉಪಾಧ್ಯಕ್ಷೆ ಶಾರವ್ವ ಇಳಿಗೇರ, ಪಿಡಿಒ ಕೊಟ್ರಪ್ಪ ಅಂಗಡಿ, ಕಾರ್ಯದರ್ಶಿ ಬಸವರಾಜ, ಗ್ರಾಪಂ ಸದಸ್ಯರಾದ ಭಾರತಿ, ಮೀನಾಕ್ಷಿ, ಗುರುಬಸವರಾಜ, ಅನ್ವರ, ನಾಗರಾಜ, ಹನುಮಂತ, ಹನುಮವ್ವ, ರೇಣುಕಪ್ಪ, ಪ್ರಶಾಂತಗೌಡ, ಹನುಮಂತ, ಲಕ್ಷ್ಮವ್ವ, ಗವಿಸಿದ್ದಪ್ಪ, ಸುವರ್ಣ, ರೇಣುಕಾ, ಮಂಜುನಾಥ, ಶಶಿಕಲಾ, ವಿಶ್ವನಾಥ, ಗೌಸಬೀ ಇತರರಿದ್ದರು.