

ಬೆಳಗಾವಿ: ಬಸವಣ್ಣನವರು ಮಾನವೀಯತೆ ಧರ್ಮ ಭಿತ್ತಿ ಸರ್ವ ಸಮಾನತೆ ಸಮಾಜ ಹುಟ್ಟುಹಾಕಲು ಕ್ರಾಂತಿಗೈದ ಯುಗಪುರುಷ. ಅವರ ಸಂದೇಶ ಮನಕುಲದ ಏಳ್ಗೆಗೆ ಸಂಜೀವಿನಿಯಾಗಿವೆ ಎಂದು ಗೋಕಾಕ ತಾಲೂಕಿನ ಕಸಾಪ ಅಧ್ಯೆ ಭಾರತಿ ಮದಭಾವಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ "ಬಸವಣ್ಣನವರು ಪ್ರತಿಪಾದಿಸಿದ ಮೌಲ್ಯಗಳು' ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಸಮಾಜದಲ್ಲಿ ಬೇರು ಬಿಟ್ಟಿದ ಜಾತಿ, ವರ್ಗ, ಲಿಂಗ ತಾರತಮ್ಯ ಹೋಗಲಾಡಿಸಿದ ಬಸವಣ್ಣನವರು ಸಮಾನತೆ ತತ್ತ$$$್ವ ಸಾರಿದರು. ದಯವೇ ಧರ್ಮದ ಮೂಲ ಎಂದು ಧರ್ಮದ ತಿರುಳನ್ನು ತಿಳಿಸಿ, ಕಾಯಕ&ದಾಸೋಹ ಸಿದ್ಧಾಂತ ಪ್ರತಿಪಾದಿಸಿ ಪ್ರತಿಯೊಬ್ಬನೂ ದುಡಿಯಬೇಕು ಎಂಬ ಸಂಸತಿ ಅನಾವರಣಗೊಳಿಸಿದ ಮಹಾನ ಪುರುಷ ಎಂದರು.
ಅಧ್ಯತೆ ವಹಿಸಿದ್ದ ಟಕದ ಅಧ್ಯೆ ರತ್ನಪ್ರಭಾ ಬೆಲ್ಲದ ಮಾತನಾಡಿ, ಪ್ರಸ್ತುತ ದಿನಗಳಿಗೆ ಅಣ್ಣನವರ ವಿಚಾರಗಳು ಅಗತ್ಯವಾಗಿ ಸಮಾಜಕ್ಕೆ ಬೇಕಾಗಿದೆ. ಜಗದ ಮಹಾಮಾನವತಾವಾದಿ ಅವರು. 800 ವರ್ಷಗಳಾದರೂ ತಮ್ಮ ಪ್ರಖರ ವಿಚಾರಗಳಿಂದ ಜೀವಂತವಾಗಿ ಉಳಿದಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು. ಇದೇ ವೇಳೆ ಬೆಳಗಾವಿ ವೀರಶೈವ ವಾಣಿ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸೋಮಲಿಂಗ ಮಾವಿನಕಟ್ಟಿ ಸ್ವಾಗತಿಸಿದರು. ವೇದಿಕೆಯ ಮೇಲೆ ಬಾಲಚಂದ್ರ ಬಾಗಿ, ಶಂಕರ ಪಟ್ಟೇದ, ಸೋಮಶೇಖರ ಚೊಣ್ಣದ ಉಪಸ್ಥಿತರಿದ್ದರು. ಸವಿತಾ ವಿರುಪಾ ಅತಿಥಿಗಳನ್ನು ಪರಿಚಯಸಿದರು. ಗೀತಾ ಬೆಣಚಮರಡಿ ವಚನ ವಿಶ್ಲೇಷಣೆ ಮಾಡಿದರು. ನಂದಿತಾ ಮಾಸ್ತಿಹೊಳಿಮಠ ವಚನ ಪ್ರಾರ್ಥನೆ ಸಲ್ಲಿಸಿದರು. ಅನುಪಮಾ ದೊಡವಾಡ ನಿರೂಪಿಸಿದರು. ಕಿರಣ ಅಗಡಿ ವಂದಿಸಿದರು.