ಅನುಭವ ಮಂಟಪದ ಆಶಯ ಸಮ ಸಮಾಜ ನಿರ್ಮಾಣ

ctd ----1-31
Published on

ಚಿತ್ರದುರ್ಗ: ಸಮಾಜದ ಕಟ್ಟಕಡೆ ವ್ಯಕ್ತಿ ಕೂಡ ಸ್ವಾಭಿಮಾನದಿಂದ ಬದುಕಬೇಕು. ಸಮಸಮಾಜ ನಿರ್ಮಾಣವಾಗಬೇಕೆಂಬ ಆಶಯದಿಂದ ಬಸವಣ್ಣನವರು ಇವತ್ತಿನ ಪಾರ್ಲಿಮೆಂಟ್ ಮಾದರಿಯಲ್ಲಿ 12ನೇ ಶತಮಾನದಲ್ಲೇ ಅನುಭವ ಮಂಟಪ ನಿರ್ಮಿಸಿದ್ದರು ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.

ಶ್ರಾವಣಮಾಸದ ಅಂಗವಾಗಿ ಶ್ರೀಮಠದಲ್ಲಿ ಸೋಮವಾರ ಏರ್ಪಡಿಸಿದ್ದ ವಚನಾಭಿಷೇಕ, ಮುರುಘಾ ಗುರುಪರಂಪರೆಯ ಸ್ವಾಮೀಜಿಗಳ ಜೀವನ ದರ್ಶನ ಹಾಗೂ ಶಿವಶರಣ ಶಂಕರ ದಾಸಿಮಯ್ಯನವರ ಶರಣೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿದರು.

ಮುನ್ನಲೆಯಲ್ಲಿದ್ದ ವಚನ ಕಾರರ ಜತೆಗೆ ಅಲಕ್ಷಿತ ವಚನಕಾರರೂ ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಇಂದಿನ ಸಮಾಜಕ್ಕೆ ತಿಳಿಸುವ ಕಾರ್ಯ ಶ್ರೀಮಠದಿಂದ ಆಗುತ್ತಿದೆ ಎಂದರು.

ಸಮ್ಮುಖ ವಹಿಸಿದ್ದ ಶ್ರೀ ಮಠದ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಶಂಕರ ದಾಸಿಮಯ್ಯ ರಚಿಸಿರುವ ನೂರಾರು ವಚನಗಳ ಪೈಕಿ ಕೆಲವು ಲಭ್ಯವಿದೆ. ಬೇಡರ ದಾಸಿಮಯ್ಯ ಹಾಗೂ ಶಂಕರ ದಾಸಿಮಯ್ಯ ಅವರಿಬ್ಬರೂ ಸಮಕಾಲೀನ ಶಿವಶರಣರು ಎಂದು ತಿಳಿಸಿದರು.

ಚಳ್ಳಕೆರೆಯ ಕೆ.ಸಿ. ವೀಣಾ, ಸ್ಮೀತಾ, ತ್ರಿವೇಣಿ, ವಿಶಾಲಾಕ್ಷಿ, ಟೈಲರ್ ಗುಮ್ಮನೂರು ಚನ್ನಪ್ಪ, ಶ್ರೀಧರ್, ಆಶಾರಾಣಿ, ಹಾಲಪ್ಪನಾಯಕ ಸಹೋದರರು, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ಕಟ್ಟಿ, ಎಸ್.ಎಂ. ಕೋಟ್ರೇಶಪ್ಪ, ನವೀನ್‌ಮಸ್ಕಲ್ ಇತರರು ಇದ್ದರು. ಉಮೇಶ್ ಪತ್ತಾರ್ ಪ್ರಾರ್ಥಿಸಿ, ಪ್ರಾಚಾರ್ಯ ತಿಪ್ಪೇಸ್ವಾಮಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net