ವಿಶೇಷ ಮಕ್ಕಳಿಗೆ ಸಮಾನ ಅವಕಾಶ

pdb-3
Published on

ಪಡುಬಿದ್ರಿ: ಸಮಾಜ ಎಲ್ಲ ವಿಶೇಷ ಮಕ್ಕಳಿಗೆ ಸಮಾನ ಅವಕಾಶ ಒದಗಿಸಬೇಕು. ಅವರ ಪ್ರತಿಭೆಗೆ ಮಾನ್ಯತೆ ನೀಡಬೇಕು ಎಂದು ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಹೇಳಿದರು.

ಶಿರ್ವ ಪಾಂಬೂರಿನಲ್ಲಿರುವ ವಿಶೇಷ ಮಕ್ಕಳ ಶಾಲೆ ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರಕ್ಕೆ ಮೂಲ ಸೌಲಭ್ಯಗಳಿಗಾಗಿ ಅದಾನಿ ಫೌಂಡೇಶನ್‌ನ 20 ಲಕ್ಷ ರೂ. ಸಿಎಸ್‌ಆರ್ ಅನುದಾನ ಹಸ್ತಾಂತರಿಸಿ ಮಾತನಾಡಿದರು.

ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ ಅಧ್ಯಕ್ಷ ಹೆನ್ರಿ ಮಿನೆಜಸ್, ಸ್ಥಾಪಕ ಅಧ್ಯಕ್ಷ ಡಾ.ಎಡ್ವರ್ಡ್ ಲೋಬೊ, ಉಡುಪಿ ಡಯಸಿಸ್‌ನ ವಿಕಾರ್ ಜನರರ್ ಫರ್ಡಿನಾಂಡ್ ಗೊನ್ಸಾಲ್ವೆಸ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net