29ರಂದು ವಿಶ್ವ ಪಾರ್ಶ್ವವಾಯು ದಿನ, ವಾಕಥಾನ್

Published on

ಹುಬ್ಬಳ್ಳಿ: ಪಾರ್ಶ್ವವಾಯು ಗಂಭೀರತೆ, ಕಾಯಿಲೆ ಬರದಂತೆ ಮುಂಜಾಗ್ರತೆ, ಆಹಾರ ಕ್ರಮದ ಬಗ್ಗೆ ಅರಿವು ಮೂಡಿಸಲು ನಗರದ ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರ ಹಾಗೂ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ಅ. 29ರಂದು ಬೆಳಗ್ಗೆ 8ಕ್ಕೆ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ.

ಭಾರತೀಯ ವೈದ್ಯಕಿಯ ಮಂಡಳಿ, ಲಯನ್ಸ್ ಹಾಗೂ ರೋಟರಿ ಕ್ಲಬ್, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ, ಬಿಜೆಪಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಸಹಯೋಗದಲ್ಲಿ ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ಏರ್ಪಡಿಸಿರುವ ವಾಕಥಾನ್ ಬಾಲಾಜಿ ಆಸ್ಪತ್ರೆ ಆವರಣದಿಂದ ಹೊರಡಲಿದೆ.

ವಿದ್ಯಾನಗರ ಶಿರೂರು ಪಾರ್ಕ್, ಆರ್ಟ್ಸ್ ಕಾಲೇಜ್, ಕಿಮ್ಸ್, ಮಹಿಳಾ ವಿದ್ಯಾಪಿಠದ ಮುಂದೆ ಸಾಗಿ ತಿಮ್ಮಸಾಗರ ಬಸವೇಶ್ವರ ದೇವಸ್ಥಾನದ ಮೂಲಕ ಆಸ್ಪತ್ರೆ ಆವರಣದಲ್ಲಿ ಸಮಾರೋಪಗೊಳ್ಳುವುದು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಲಿದ್ದು, ಆಸ್ಪತ್ರೆಯ ಚೇರ್ಮನ್ ಡಾ. ಕ್ರಾಂತಿಕಿರಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net