

ಗುಳೇದಗುಡ್ಡ: ಸೊಳ್ಳೆ ನಿಯಂತ್ರಣದಿಂದ ಮಲೇರಿಯಾ ಸೇರಿ ವಿವಿಧ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ನಾಗರಾಜ ಕುರಿ ಹೇಳಿದರು.
ಸ್ಥಳೀಯ ವೆಂಕಟೇಶ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಲೇರಿಯಾ ಹಾಗೂ ಹಾಗೂ ಡೆಂಘೆ ವಿರೋಧಿ ಮಾಸಾಚರಣೆಯ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಲೇರಿಯಾ ಪ್ಲಾಸೋಡಿಯಾ ಎಂಬ ಸೂಕ್ಷ್ಮಾಣು ಜೀವಿ ಮೂಲಕ ಬರುತ್ತದೆ. ವಿಪರೀತ ಜ್ವರ, ವಾಂತಿ, ತಲೆನೋವು ಲಕ್ಷಣ ಕಂಡು ಬಂದರೆ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಜಿಲ್ಲಾ ಮಲೇರಿಯಾ ಮೇಲ್ವಿಚಾರಕ ಕೆ.ಪಿ. ಹಂಪಿಹೊಳಿ ಮಾತನಾಡಿ, ಮಳೆಗಾಲದಲ್ಲಿ ಡೆಂಘೆ , ಮಲೇರಿಯಾ, ಚಿಕೂನ್ ಗುನ್ಯಾ ಕಾಯಿಲೆಗಳು ಹರಡುವಿಕೆ ಸಾಧ್ಯತೆ ಹೆಚ್ಚಿರುತ್ತದೆ. ಸಾರ್ವಜನಿಕರು ಮನೆ ಹಾಗೂ ಸುತ್ತಲೂ ಶುಚಿತ್ವ ಕಾಯ್ದುಕೊಳ್ಳಬೇಕು ಎಂದರು.
ಡಾ.ಅನಿಲ ಉಕ್ಕಲಿ, ಪುರಸಭೆ ಮುಖ್ಯಾಧಿಕಾರಿ ಅಸ್ಲಂ ಮುಜಾವರ, ಸದಸ್ಯರಾದ ಶಿಲ್ಪಾ ಹಳ್ಳಿ, ವಿದ್ಯಾ ಮುರಗೋಡ, ವಂದನಾ ಭಟ್ಟಡ, ಜ್ಯೋತಿ ಆಲೂರ, ಯಲ್ಲಪ್ಪ ಮನ್ನಿಕಟ್ಟಿ, ಪ್ರಕಾಶ ಮುರಗೋಡ, ತಾಲೂಕು ಮಲೇರಿಯಾ ಮೇಲ್ವಿಚಾರಕ ಮಂಜುನಾಥ ಅಂಗಡಿ, ಎಂ.ಪಿ. ಪಾಗದ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.