ಮರಗಳಿದ್ದರೆ ಬಿಸಿಲು ಬೇಗೆ ದೂರ

5CKD4
Published on

ಚಿಕ್ಕೋಡಿ: ಪ್ರತಿಯೊಬ್ಬರೂ ಪರಿಸರ ಸಂರಕ್ಷಿಸಲು ಸಸಿ ನೆಟ್ಟು ಬೆಳೆಸುವುದರಿಂದ ಬಿಸಿಲು ಬೇಗೆ ಕಡಿಮೆಯಾಗಿ ಉತ್ತಮ ಆಮ್ಲಜನಕ ದೊರೆಯುವುದಲ್ಲದೆ ಪರಿಸರದ ಸೌಂದರ್ಯ ಹೆಚ್ಚಾಗಲಿದೆ. ಮುಂಬರುವ ಪೀಳಿಗೆಗೆ ಉತ್ತಮ ಪರಿಸರ ನೀಡುವುದು ಎಲ್ಲರ ಕರ್ತವ್ಯ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಎನ್. ವಣ್ಣೂರ ಹೇಳಿದರು.

ಕೇರೂರ ಗ್ರಾಪಂ ವ್ಯಾಪ್ತಿಯ ಸಯ್ಯದ ಕೋಡಿ ಅಮೃತ ಸರೋವರ ದಡದಲ್ಲಿ ಗುರುವಾರ ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವಿ ಮಾತನಾಡಿ, ಪರಿಸರದ ಜಾಗೃತಿ ಮೂಡಿಸಲು ಪರಿಸರ ಆಚರಿಸಲಾಗುತ್ತದೆ. ಮಾನವನ ಚಟುವಟಿಕೆಗಳಿಂದ ಪರಿಸರಕ್ಕೆ ಆಗುವ ಹಾನಿ ತಡೆಗಟ್ಟುವುದು ಮತ್ತು ಭೂಮಿಯನ್ನು ರಕ್ಷಿಸುವುದು ಗುರಿಯಿದೆ ಎಂದು ತಿಳಿಸಿದರು. ಸಹಾಯಕ ನಿರ್ದೇಶಕ ಎಸ್.ಎಸ್. ಮಠದ ಮಾತನಾಡಿ, ಪ್ಲಾಸ್ಟಿಕ್‌ಮುಕ್ತ ಗ್ರಾಮಗಳನ್ನಾಗಿ ರೂಪಿಸಲು ಕ್ರಮವಹಿಸಬೇಕೆಂದು ಗ್ರಾಪಂ ಸಿಬ್ಬಂದಿಗೆ ಸೂಚಿಸಿದರು. ಗ್ರಾಪಂ ಅಧ್ಯಕ್ಷ ವಿ.ಆರ್. ಪಾಟೀಲ, ಪಿಡಿಒ ವಿನೋದ ಆಸೋದೆ, ರಂಜಿತ ಕಾರ್ಣಿಕ, ಅಕ್ಷಯ ಠಕ್ಕಪ್ಪಗೋಳ, ಮುತ್ತೆಪ್ಪ ಯಾದಗುಡೆ, ಮಂಜುನಾಥ ಧನವಡೆ, ಮಹೇಶ ಪಾಟೀಲ, ಆಶಾರಾಣಿ ಮೋಪಗಾರ, ಆರತಿ ಧನವಡೆ, ಮಹಾಂತೇಶ ಬೆಕ್ಕೇರಿ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net