ಅಸೂಯೆ ಬಿಟ್ಟು ಅಭಿವೃದ್ಧಿಗೆ ಆದ್ಯತೆ

web2
ಮನಿಹಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದಿ. ರಾಮದುರ್ಗ ತಾಲೂಕು ರೂರಲ್ ಇಂಡಸ್ಟ್ರಿಯಲ್ ಆ್ ಸೊಸೈಟಿ ಸುವರ್ಣ ಮಹೋತ್ಸವ ಸಮಾರಂಭವನ್ನು ಶಾಸಕ ಅಶೋಕ ಪಟ್ಟಣ ಉದ್ಘಾಟಿಸಿದರು. ಬಸವರಾಜ ಹಿರೇರಡ್ಡಿ, ಸುಧಾಕರ ಶಿರೂರ ಇತರರಿದ್ದರು.
Published on

ರಾಮದುರ್ಗ: ವಿರೋಧ ಪಕ್ಷದಲ್ಲಿದ್ದಾಗಲೂ ಸರ್ಕಾರದ ಗಮನ ಸೆಳೆದು ಮನಿಹಾಳ ಸೊಸೈಟಿ ಸಾಲಮನ್ನಾ ಮಾಡಿಸಿರುವೆ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

ತಾಲೂಕಿನ ಮನಿಹಾಳ ಗ್ರಾಮದಲ್ಲಿರುವ ದಿ. ರಾಮದುರ್ಗ ತಾಲೂಕು ರೂರಲ್ ಇಂಡಸ್ಟ್ರಿಯಲ್ ಆ್ ಸೊಸೈಟಿ ಸುವರ್ಣ ಮಹೋತ್ಸವ ಸಮಾರಂಭವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿ, ಅಸೂಯೆ ಬಿಟ್ಟು ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದರು.

ಸೊಸೈಟಿ ಮಾಜಿ ಅಧ್ಯಕ್ಷ ಬಸವರಾಜ ಹಿರೇರಡ್ಡಿ, ನಿರ್ದೇಶಕ ಸುಧಾಕರ ಶಿರೂರ, ಮುಖಂಡರಾದ ಪರಶುರಾಮ ಢಾಗೆ, ಗಜಾನನ ಗುಂಜೇರಿ ಮಾತನಾಡಿದರು. ಗ್ರಾಮದ ಅಯ್ಯಪ್ಪಸ್ವಾಮಿ ದೇವಾಲಯದ ಪುರೋಹಿತ ಲಕ್ಷ್ಮಣಸ್ವಾಮಿ ದೇವಾಂಗಮಠ ಆಶೀರ್ವಚನ ನೀಡಿದರು. ಹಿರಿಯರನ್ನು ಸತ್ಕರಿಸಲಾಯಿತು.

ರೂರಲ್ ಸೊಸೈಟಿ ಅಧ್ಯಕ್ಷ ಚಿನ್ನಪ್ಪ ಕಳಸನ್ನವರ, ಗ್ರಾಪಂ ಅಧ್ಯಕ್ಷೆ ಹನುಮವ್ವ ಪಿಡ್ಡನ್ನವರ, ಉಪಾಧ್ಯಕ್ಷೆ ಹನುಮವ್ವ ಪ್ಯಾಟಿ, ಬಿಡಿಸಿಸಿ ಬ್ಯಾಂಕ್ ನಿರೀಕ್ಷಕ ನಾಗರಾಜ ಭಜಂತ್ರಿ, ನಾಮದೇವಪ್ಪ ಹುಗ್ಗಿ, ಶಂಕ್ರಣ್ಣ ತುಂಬಳ, ಪರಪ್ಪ ಜಂಗವಾಡ, ಶ್ರೀನಿವಾಸ ಕುರುಡಗಿ, ರವೀಂದ್ರ ಹರವಿ, ನಾರಾಯಣಪ್ಪ ಬೆನ್ನೂರ, ಅಶೋಕ ರಾಮದುರ್ಗ, ಭೋಜಪ್ಪ ಮುಗನೂರ, ಮಂಜುನಾಥ ಹೊನ್ನುಗರ, ರಾಘವೇಂದ್ರ ಡೊಂಬರ, ರಮೇಶ ಮುಗನೂರ, ನೀಲಕಂಠ ಮುಗನೂರ, ದೀಪಾ ಕಿಂಡ್ರಿ, ನೀಲಕಂಠ ಮುಗನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net