ಪರಿಸರ ಸಂರಕ್ಷಣೆಗೆ ಆದ್ಯತೆ ಸಿಗಲಿ

1Athni1
Published on

ಅಥಣಿ: ಆರೋಗ್ಯಕರ ಮತ್ತು ಮಾಲಿನ್ಯ ಮುಕ್ತ ವಾತಾವರಣ ನಿರ್ಮಾಣಕ್ಕೆ ಪರಿಸರ ಸಂರಕ್ಷಣೆ ಅಗತ್ಯ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ ಬುಲಬುಲೆ ಹೇಳಿದರು.

ಪಟ್ಟಣದ ಸಿದ್ಧೇಶ್ವರ ದೇವಸ್ಥಾನ ರಸ್ತೆಯ ಬದಿಯಲ್ಲಿ ಸೋಮವಾರ ಲಯನ್ಸ್ ಕ್ಲಬ್ ಅಥಣಿ, ಪುರಸಭೆ, ಅರಣ್ಯ ಇಲಾಖೆ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗಿಡಮರಗಳು ಉಸಿರಾಡಲು ಶುದ್ಧ ಆಮ್ಲಜನಕ ಒದಗಿಸುವುದಲ್ಲದೆ, ಅನೇಕ ಜೀವಿಗಳಿಗೆ ಆಶ್ರಯ ತಾಣವಾಗಿದೆ. ಸಂಘ, ಸಂಸ್ಥೆಗಳು ಸಮಾಜಮುಖಿ ಸೇವೆಯಲ್ಲಿ ತೊಡಗಿದರೆ ಉತ್ತಮ ಪರಿಸರ ನಿರ್ಮಾಣ ಸಾಧ್ಯ ಎಂದರು.

ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ವಿಶೇಷ ದಿನಗಳಂದು ಸಸಿ ನೆಟ್ಟು ಪೋಷಣೆ ಮುಂದಾಗಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮಾತನಾಡಿದರು. ಆನಂದ ಟೊಣಪಿ, ವಿನೋದ ಕನಮಡಿ, ಡಾ.ಸಂಜುಕುಮಾರ ಗುಂಜಿಗಾವಿ, ಡಾ.ಮಹೇಶ ಕಾಪಸಿ, ಡಾ.ಗುರುಪುತ್ರ ಪಾಟೀಲ, ಡಾ.ಸಂಗಮೇಶ ಮಮದಾಪುರ, ಶಿವಾಜಿ ಮುಂಜೆ, ಮಹಾಂತೇಶ ಕೌಲಾಪುರ, ಅಶೋಕ ಹೊಸೂರ, ಚಿದಾನಂದ ನರಗಟ್ಟಿ, ಸೋಮು ವಾಂಗಿ, ಬಿ.ಡಿ.ನಾಯಿಕ, ಮಂಜುನಾಥ ಬಡಿಗೇರ, ಮಲ್ಲು ಬುಟಾಳೆ, ದತ್ತಾ ವಾಸ್ಟರ್, ಮಯೂರ ಟೊಣಪಿ, ಎಂ.ಬಿ.ನಾಯಿಕ, ಶಶಿಕಾಂತ ಹುಲಕುಂದ, ಅಮಿತ ಮಹಾಜನ, ಆನಂದ ಕುಂಬಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net