ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

Jutti School
ಬಾರಿಗಿಡದೊಡ್ಡಿ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆ ಕುರಿತ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕರಾದ ಚಂದ್ರು ಕಬ್ಬಲಗೇರಿ, ಚಂದ್ರಶೇಖರ್ ಜೇವೂರು, ಶಿಕ್ಷಕರಾದ ವಿಜಯ, ಗಾಯತ್ರಿ, ಈಶ್ವರಮ್ಮ ಇದ್ದರು.
Published on

ಹಟ್ಟಿಚಿನ್ನದಗಣಿ: ಮುಂದಿನ ಪೀಳಿಗೆಗಾಗಿ ಸ್ವಚ್ಛ, ಸುಂದರ ಪ್ರಕೃತಿ, ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಶಿಕ್ಷಕ ಮಹ್ಮದ ಫರೀದ್ ಹೇಳಿದರು.

ಪೈದೊಡ್ಡಿ ಗ್ರಾಪಂ ವ್ಯಾಪ್ತಿಯ ಬಾರಿಗಿಡದೊಡ್ಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಲುಮರದ ತಿಮ್ಮಕ್ಕ ಅವರ ನೆನಪಿಗಾಗಿ ಇಕೋ ಕ್ಲಬ್ ಅಡಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆ ಕುರಿತು ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬರೂ ಪರಿಸರವನ್ನು ಸಂರಕ್ಷಿಸಬೇಕು. ಹಸಿರೇ ನಮ್ಮ ಉಸಿರು ಎಂದು ಮಕ್ಕಳಿಗೆ ತಿಳಿಸಬೇಕು. ಪರಿಸರದ ಪ್ರಜ್ಞೆ ಹಾಗೂ ಜ್ಞಾನವನ್ನು ಗಳಿಸಿಕೊಂಡರೆ ಸಾಲದು. ಅದರ ಬಗ್ಗೆ ಕಾಳಜಿಯೂ ಹೊಂದಿರಬೇಕು ಎಂದರು.

ನಂತರ ಮಕ್ಕಳಿಗೆ ಮನೆಯಲ್ಲಿ ಹಸಿ ಮತ್ತು ಒಣ ಕಸ ಬೇರ್ಪಡಿಸಿ ತ್ಯಾಜ್ಯ ವಿಲೇವಾರಿ ಮಾಡುವ ಕುರಿತು ತಿಳಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷೆ ಅಂಬಮ್ಮ ದುರುಗಪ್ಪ, ಪ್ರಮುಖರಾದ ದುರಗಣ್ಣ, ಶಂಕರಗೌಡ, ಮಲ್ಲಯ್ಯ, ನಾಗಪ್ಪ, ಸೋಮಯ್ಯ, ಶಿವರಾಜಗೌಡ, ತಿಮ್ಮಯ್ಯ, ರಾಮಯ್ಯ, ಸಾಬಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net