ಪರಿಸರ ಸಂರಕ್ಷಣೆ ಮನುಕುಲದ ಜವಾಬ್ದಾರಿ

Principal Ashwatthanarayan planted a tree.
Published on

ಅಂಕೋಲಾ: ಪರಿಸರ ಕಾಳಜಿ ಹಾಗೂ ಸಂರಕ್ಷಣೆ ಇಡೀ ಮನುಕುಲದ ಜವಾಬ್ದಾರಿಯಾಗಿದೆ. ಈ ದಿಸೆಯಲ್ಲಿ ವಿದ್ಯಾ ರ್ಥಿಗಳು ಕಾರ್ಯೋನ್ಮುಖರಾಗಿ ಪರಿಸರ ರಕ್ಷಿಸುವ ಜತೆಯಲ್ಲಿ ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಪ್ರಾಚಾರ್ಯ ಅಶ್ವತ್ಥನಾರಾಯಣ ಹೆಗಡೆ ಹೇಳಿದರು.

ಇಲ್ಲಿಯ ಕೆಎಲ್​ಇ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಎನ್​ಎಸ್​ಎಸ್ ಘಟಕದ ಸಹ ಯೋಗದೊಂದಿಗೆ ಗುರುವಾರ ಹಮ್ಮಿಕೊಂಡ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ವಿದ್ಯಾ ತಾಂಡೇಲ ಮಾತನಾಡಿ, ಮಾನವಕುಲ ಸ್ವಸ್ಥವಾಗಿ ಇರಬೇಕಾದರೆ ಅದಕ್ಕಾಗಿ ಪರಸರವನ್ನು ರಕ್ಷಿಸಲೇಬೇಕು. ಮನುಷ್ಯ ಬದುಕಲುಬೇಕಾದ ಬೆಳಕು, ಗಾಳಿ, ನೀರು ಮತ್ತಿತರ ವಸ್ತುಗಳನ್ನು ಪ್ರಕೃತಿ ಉಚಿತವಾಗಿ ನೀಡುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಿಸರ ರಕ್ಷಿಸಲು ಪಣತೊಡಬೇಕು ಎಂದರು.

ಉಪನ್ಯಾಕಸರಾದ ಸಂತೋಷ ಬಂಟ, ಜಯಾ ಗಾಂವಕರ, ಸುಮತಿ ಗೌಡ, ಜ್ಞಾನೇಶ್ವರಿ ನಾಯ್ಕ, ಕಾಂಚನಾ ನಾಯ್ಕ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net