

ಇಳಕಲ್ಲ(ಗ್ರಾ): ಪ್ರಸ್ತುತ ಸಮಾಜದಲ್ಲಿ ನಗದೀಕರಣ ಮತ್ತು ಕಲುಷಿತ ವಾತಾವರಣ ಸಂದರ್ಭ ಪರಿಸರ ಸಂರಕ್ಷಣೆಯು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಬಿ.ಎಂ. ವಾಲೀಕಾರ ಹೇಳಿದರು.
ಇಲ್ಲಿನ ಸಿದ್ದಾರ್ಥ ಪ್ರೌಢಶಾಲೆಯಲ್ಲಿ ನಡೆದ ರಾಜಗುರು ಕ್ರಿಯಾಶಕ್ತಿ ನಿಂಗಯ್ಯ ಒಡೆಯರ ಅವರ ದತ್ತಿ ಕಾರ್ಯಕ್ರಮದಲ್ಲಿ ‘ಪರಿಸರ ಸಂರಕ್ಷಣೆಯಲ್ಲಿ ಸಾಹಿತ್ಯದ ಪಾತ್ರ’ ಕುರಿತು ಅವರು ಮಾತನಾಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ದತ್ತಿನಿಧಿ ಉಪನ್ಯಾಸದಲ್ಲಿ ‘ಮನೆಗೊಂದು ಮರ ಊರಿಗೊಂದು ವನ’ ಎಂಬಂತೆ ಪರಿಸರದಲ್ಲಿ ಸಾಹಿತ್ಯದ ಕುರಿತು ವಿವರಿಸಿದರು.
ದತ್ತಿದಾನಿ ರಾಜಗುರು ಕ್ರಿಯಾಶಕ್ತಿ ನಿಂಗಯ್ಯ ಒಡೆಯರ ಮಾತನಾಡಿ, ಪ್ರತಿಯೊಬ್ಬರೂ ಪರಿಸರ ಪ್ರಜ್ಞೆ, ನಿಸರ್ಗ ಜೀವನ, ಯೋಗ ಉತ್ತಮ ಹವ್ಯಾಸ ಬೆಳೆಸಿಕೊಳ್ಳಲು ಸಲಹೆ ನೀಡಿದರು.
ಸಿದ್ದಣ್ಣ ಆಮದಿಹಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಂಗಯ್ಯ ಒಡೆಯರ ಅವರು 83ನೇ ವಯಸ್ಸಿನಲ್ಲೂ ಸಾಹಿತ್ಯ ಆಸಕ್ತಿ, ಓದುವ, ಕಲಿಯುವ ಉತ್ಸಾಹ ಯುವಕರು ನಾಚುವಂತದ್ದಾಗಿದೆ. ‘ಇತಿಹಾಸ ಅರಿಯದವ ಇತಿಹಾಸ ನಿರ್ಮಿಸಲಾರ’ ಎಂಬ ಅಂಬೇಡ್ಕರ್ ಅವರ ಮಾತುಗಳನ್ನು ಒತ್ತಿ ಹೇಳುತ್ತ ನಾವು ಪರಂಪರೆ ಇತಿಹಾಸ ಹಿರಿಯರು ಬದುಕಿದ ಜೀವನ ಆದರ್ಶಗಳು ನಮಗೆ ಇಂದಿಗೂ ಮಾರ್ಗದರ್ಶಿಯಾಗಿವೆ ಎಂದರು.
ವಿರುಪಾಕ್ಷಗೌಡ ಹಾಲಭಾವಿ ಮಾತನಾಡಿದರು.
ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾದೇವ ಕಂಬಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯದರ್ಶಿ ಉಮೇಶ ಶಿರೂರ ಸ್ವಾಗತಿಸಿದರು. ಜಿಗಳೂರ ವಂದಿಸಿದರು. ಹಿರೇಮಠ ಗುರುಗಳು ನಿರೂಪಿಸಿ, ವಂದಿಸಿದರು.