ಜನ ಜಾಗೃತಿಯಿಂದ ಪರಿಸರ ರಕ್ಷಣೆ ಸಾಧ್ಯ

ಚಿತ್ರ ಶೀರ್ಷಿಕೆ23-1
ಅರಕಲಗೂಡು ತಾಲೂಕು ಕೊಣನೂರಿನಲ್ಲಿ ಶನಿವಾರ ಆಯೋಜಿಸಿದ್ದ ಪರಿಸರ ಸ್ನೇಹಿ ಗಣಪತಿ ವಿಗ್ರಹ ತಯಾರಿಕಾ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಜೇಡಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣಪತಿ ಮೂರ್ತಿ ಪ್ರದರ್ಶಿಸಿದರು. ಪ್ರದೀಪ್ ರಾಮಸ್ವಾಮಿ, ಬಸವರಾಜು, ವೆಂಕಟೇಶ್, ಪಾಂಡುರಂಗ ಇತರರಿದ್ದರು.
Published on

ಅರಕಲಗೂಡು: ಮನುಕುಲದ ಉಳಿವಿಗಾಗಿ ಪರಿಸರ ಶುಚಿತ್ವ ಕಾಪಾಡುವ ಉದ್ದೇಶದಿಂದ ಪರಿಸರಸ್ನೇಹಿ ಗಣಪತಿ ಮೂರ್ತಿ ತಯಾರಿಕೆ ಕುರಿತು ಜನ ಜಾಗೃತಿ ಅತ್ಯಗತ್ಯ ಎಂದು ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರದೀಪ್ ರಾಮಸ್ವಾಮಿ ಸಲಹೆ ನೀಡಿದರು.

ತಾಲೂಕಿನ ಕೊಣನೂರು ಗಣಪತಿ ಪೆಂಡಾಲ್ ಆವರಣದಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿಕಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಸಾಯನಿಕ ಬಳಸಿ ಗಣಪತಿ ಮೂರ್ತಿ ತಯಾರಿಸುವುದರಿಂದ ಪರಿಸರ ಕಲುಷಿತಗೊಂಡು ಅನೇಕ ದುಷ್ಪರಿಣಾಮ ಎದುರಿಸುವಂತಾಗಿದೆ. ನೀರಿನಲ್ಲಿ ಬೆರೆತ ರಾಸಾಯನಿಕದಿಂದ ಅಪಾರ ಜಲಚರ ಜೀವಿಗಳ ಜೀವಕ್ಕೂ ಕಂಟಕವಾಗಲಿದೆ. ಹೀಗಾಗಿ ಎಲ್ಲರೂ ಎಚ್ಚೆತ್ತು ರಾಸಾಯನಿಕ ಬಳಕೆಗೆ ಕಡಿವಾಣ ಹಾಕುವ ಮೂಲಕ ಪರಿಸರಸ್ನೇಹಿ ಗಣಪತಿ ಮೂರ್ತಿ ತಯಾರಿಕೆಗೆ ಆದ್ಯತೆ ನೀಡಬೇಕಿದೆ ಎಂದರು.

ಮಕ್ಕಳು ಕಾರ್ಯಾಗಾರದಲ್ಲಿ ತಾವು ತಯಾರಿಸಿದ ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನು ಮನೆಗೆ ಕೊಂಡೊಯ್ದು ಭಕ್ತಿ ಶ್ರದ್ಧೆಯಿಂದ ಕೂರಿಸಿ ಗಣಪತಿ ಹಬ್ಬ ಆಚರಿಸುವಂತೆ ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷ ನಾಗರಾಜು, ನಿವೃತ್ತ ಪ್ರಾಂಶುಪಾಲ ಬಸವರಾಜು, ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ್, ತಾಪಂ ಮಾಜಿ ಸದಸ್ಯರಾದ ಎಂ.ಟಿ.ಪಾಂಡುರಂಗ, ಬಿ.ಸಿ.ವೀರೇಶ್, ಸಿದ್ದರಾಮೇಗೌಡ, ಶ್ರೀನಿವಾಸ್ ಮೂರ್ತಿ, ಉಪನ್ಯಾಸಕ ದಶರಥ, ಜಗದೀಶ್, ಮುಖಂಡರಾದ ಕಾಂತರಾಜು, ಸತೀಶ್, ನಸ್ರುಲ್ಲಾ ಟಿಪ್ಪು, ಶ್ರೀನಿವಾಸ್ ಇತರರಿದ್ದರು.

ಅರೇಮಾದನಹಳ್ಳಿ ಶಿಲ್ಪಿ ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ವಿವಿಧ ಶಾಲೆಯ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ಕಾರ್ಯಾಗಾರದಲ್ಲಿ ಉತ್ಸಾಹದಿಂದ ಭಾಗವಹಿಸಿ ಜೇಡಿ ಮಣ್ಣಿನಿಂದ ಆಕರ್ಷಕವಾದ ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿಸಿ ಪ್ರತಿಭಾ ಕೌಶಲ ಪ್ರದರ್ಶಿಸಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net