ಆಮ್ಲಜನಕ ಹೆಚ್ಚಿಸಲು ಪರಿಸರ ರಕ್ಷಣೆ ಅಗತ್ಯ

19sor1
ಕುದರಗಣಿ ಗ್ರಾಮದಲ್ಲಿ ದೊಡ್ಡ ಕೆರೆ ಏರಿಯ ಮೇಲೆ ಗಿಡ ನೆಡುವ ಕಾರ್ಯಕ್ರಮಕ್ಕೆ ಸುಬ್ರಾಯ ನಾಯ್ಕ ಚಾಲನೆ ನೀಡಿದರು. ಹನುಮಂತಪ್ಪ, ಅಣ್ಣಪ್ಪ, ಲೋಕೇಶ್ ದೊಡ್ಡಬಾರ್ಕಿ ಇತರರಿದ್ದರು.
Published on

ಸೊರಬ: ಗಿಡಗಳನ್ನು ನೆಡುವ ಮೂಲಕ ಉತ್ತಮ ಪರಿಸರ ಹಾಗೂ ಹೆಚ್ಚಿನ ಆಮ್ಲಜನಕವನ್ನು ಪರಿಸರದಿಂದ ಪಡೆಯಲು ಸಾಧ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನಾಽಕಾರಿ ಸುಬ್ರಾಯ ನಾಯ್ಕ ಹೇಳಿದರು.

ಬುಧವಾರ ತಾಲೂಕಿನ ಕುದರಗಣಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪುನಶ್ಚೇತನಗೊಳಿಸಿದ ಊರ ಮುಂದಿನ ದೊಡ್ಡ ಕೆರೆ ಏರಿಯ ಮೇಲೆ ಹಮ್ಮಿಕೊಂಡಿದ್ದ ಗಿಡಗಳ ನಾಟಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮನುಷ್ಯನಿಗೆ ದಿನಕ್ಕೆ 3 ಸಾವಿರ ರೂ. ಬೆಲೆ ಬಾಳುವಷ್ಟು ಆಮ್ಲಜನಕ ಅವಶ್ಯಕತೆ ಇದೆ. ಅರಣ್ಯ ನಾಶ ಹೀಗೆ ಮುಂದುವರಿದರೆ ಮುಂದಿನ ಪೀಳಿಗೆ ಆಮ್ಲಜನಕವನ್ನೂ ಖರೀದಿ ಮಾಡಬೇಕಾಗಬಹುದು. ಹಾಗಾಗಿ ಪ್ರತಿಯೊಬ್ಬರೂ ಗಿಡ ನೆಟ್ಟು ಅದನ್ನು ಪೋಷಿಸಿ, ಬೆಳೆಸಬೇಕು. ಸಸ್ಯ ಸಂಪತ್ತು ಸಮೃದ್ಧಿಯಾಗಿದ್ದರೆ ನಾವು ಉತ್ತಮ ಜೀವನ ನಡೆಸಬಹುದು. ಕೆರೆ ಏರಿ ಮೇಲೆ ನಾಟಿಯಾದ ಗಿಡಗಳನ್ನು ರಕ್ಷಣೆ ಮಾಡಬೇಕು ಎಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಕೆರೆ ಏರಿ ಮೇಲೆ ಮಾವು, ಹಲಸು, ನೇರಳೆ, ನೆಲ್ಲಿ, ಸಂಪಿಗೆ ಜಾತಿಯ ಒಟ್ಟು 300 ಗಿಡಗಳನ್ನು ಗ್ರಾಮಸ್ಥರ ಸಹಕಾರದಿಂದ ನಾಟಿ ಮಾಡಲಾಯಿತು. ಕೆರೆ ಸಮಿತಿ ಅಧ್ಯಕ್ಷ ಹನುಮಂತಪ್ಪ, ಗ್ರಾಮ ಸಮಿತಿ ಅಧ್ಯಕ್ಷ ಅಣ್ಣಪ್ಪ, ಕೆರೆ ಸಮಿತಿ ಸದಸ್ಯರು, ಗ್ರಾಮ ಸಮಿತಿ ಸದಸ್ಯರು ಕೃಷಿ ಮೇಲ್ವಿಚಾರಕ ಲೋಕೇಶ್ ದೊಡ್ಡಬಾರ್ಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net