

ಬೆಳಗಾವಿ: ಪರಿಸರ ಸಂರಣೆ ನಮ್ಮೆಲ್ಲರ ಹೊಣೆಯಾಗಿದೆ. ಎಲ್ಲರೂ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ಆರ್ಎಫ್ಒ ಪವನ ಕುರನಿಂಗ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಈಚೆಗೆ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ವನ್ಯಜಿವಿಗಳ ರಕ್ಷಣೆಗೆ ಅಭಯಾರಣ್ಯ ಪೂರಕವಾಗಿದೆ. ವಿದ್ಯಾರ್ಥಿಗಳು ಹೆಚ್ಚು ಸಸಿ ನೆಡುವ ಮೂಲಕ ಪರಿಸರ ಕಾಪಾಡಬೇಕು. ಕಾಡಿನ ಜೀವ ಸಂಕುಲದ ರಕ್ಷಣೆಯು ನಮ್ಮ ಜವಾಬ್ದಾರಿಯಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ, ಕಾಡಿನ ಮಹತ್ವ, ವನ್ಯಜಿವಿಗಳ ಸಂರಣೆ ಬಗ್ಗೆ ತಿಳಿಸಲಾಯಿತು. ಕಾಡಿನ ಪ್ರಾಣಿಗಳ ಕುರಿತಾದ ವಿಶೇಷ ಮಾಹಿತಿ ನೀಡಿ, ಮಕ್ಕಳನ್ನು ಅಭಯಾರಣ್ಯದಲ್ಲಿ ಸಾರಿ ಮಾಡಿಸಿದರು.
ಡಿಆರ್ಎಫ್ಒ ಎಂ.ಜಿ.ಹಿರೇಮಠ, ಸಂತೋಷ ಗಸ್ತಿ, ಪ್ರಜ್ವಲ ಕುಲಕರ್ಣಿ ಮತ್ತು ಸಿಬ್ಬಂದಿ ಶಾಲಾ ಮಕ್ಕಳಿಗೆ ಕಾಡಿನ ಮಹತ್ವದ ಕುರಿತು ಮತ್ತು ಪ್ರಾಣಿಗಳ ಕುರಿತಾಗಿ ವಿಶೇಷ ಮಾಹಿತಿ ನೀಡಿದರು. ಮಕ್ಕಳಿಗಾಗಿ ಪರಿಸರ ಕುರಿತಾದ ರಸಪ್ರಶ್ನೆ ಕಾರ್ಯಕ್ರಮ ನಡೆಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬೆಳಗಾವಿ ತಾಲೂಕಿನ ಕಾಕತಿಯ ಸರ್ಕಾರಿ ಪ್ರೌಢಶಾಲೆಯ ವಿಾನ ಶಿಕಿ ಶಶಿಕಲಾ ಹೊಸೂರ, ಗೀತಾ ಕಾನಟ್ಟಿ ಮತ್ತು ದೈಹಿಕ ಶಿಣ ಶಿಕ ಮಹೇಶ ಅಕ್ಕಿ ಸೇರಿ ಪ್ರೌಢಶಾಲೆಯ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.