ಪರಿಸರ ರಕ್ಷಣೆ ಸರ್ವರ ಹೊಣೆ

BRM BAPUJI 17 (1)
Published on

ಭರಮಸಾಗರ: ಪರಿಸರ ಉಳಿವು ಸರ್ವರ ಹೊಣೆಗಾರಿಕೆ ಆಗಿದ್ದು, ಈ ನಿಟ್ಟಿನಲ್ಲಿ ಪ್ರತಿ ವ್ಯಕ್ತಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯ ಶಿಕ್ಷಕ ಜಿ.ಸಿ.ಗೋಂಚಿಕಾರ್ ಹೇಳಿದರು.

ಇಲ್ಲಿನ ಬಾಪೂಜಿ ಪ್ರೌಢಶಾಲೆ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಓಝೋನ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಸರದ ಉಳಿವು ಅತ್ಯಗತ್ಯವಾಗಿದೆ. ಮಕ್ಕಳು ಶಾಲಾ ಆವರಣ, ಮನೆ ಸುತ್ತಮುತ್ತಲ ಜಾಗದಲ್ಲಿ ಸಸಿ ನೆಟ್ಟು ಪೋಷಿಸಬೇಕು. ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ಶಿಕ್ಷಕರಾದ ಸಿ.ಡಿ.ವೀರಭದ್ರಪ್ಪ, ಎನ್.ರಾಜಶೇಖರ್, ಕೆ.ಸಿದ್ದರಾಮಪ್ಪ, ಕೆ.ಎನ್.ವಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net