ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

Untitled-2
ಮಲ್ಲಾಪುರದ ರಾಮಣ್ಣ ಬಡಾವಣೆಯಲ್ಲಿ ವನಮಹೋತ್ಸವಕ್ಕೆ ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಉಪಾಧ್ಯಕ್ಷ ಜಿ.ಆನಂದ್​, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಉಮೇಶ್​, ಬಿ.ಜಿ.ರವಿಕುಮಾರ್​, ಸಹಾಯಕ ಅಭಿಯಂತ ಶ್ರೀನಿವಾಸ್​, ಅಭಿಯಂತ ಗಜೇಂದ್ರ ಇದ್ದರು.
Published on

ನೆಲಮಂಗಲ : ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಗಿಡಗಳನ್ನು ನೆಡುವ ಮೂಲಕ ಉತ್ತಮ ವಾತಾವರಣ ನಿರ್ಮಾಣಕ್ಕೆ ಮುಂದಾಗಬೇಕು ಎಂದು ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ತಿಳಿಸಿದರು.

ನಗರಸಭೆ ವ್ಯಾಪ್ತಿಯ ಮಲ್ಲಾಪುರದ ರಾಮಣ್ಣ ಬಡಾವಣೆಯಲ್ಲಿ ನಗರಸಭೆ ಹಾಗೂ ಅರಿಶಿನಕುಂಟೆ ಸ್ಫೋರ್ಟ್ಸ್​ ಅಸೋಸಿಯೇಷನ್​ ಸಹಯೋಗದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವನಮಹೋತ್ಸವದಲ್ಲಿ ಮಾತನಾಡಿದರು. ಮುಂದಿನ ಪೀಳಿಗೆಗೆ ಉತ್ತಮ ಆಮ್ಲಜನಕ, ಪರಿಸರ ಉಳಿಯಬೇಕಾದರೆ ಗಿಡಗಳನ್ನು ನೆಟ್ಟು ಅರಣ್ಯ ಬೆಳೆಸಬೇಕು. ವನಮಹೋತ್ಸವ ಹೆಸರಿನಲ್ಲಿ ನಗರಸಭೆ ವ್ಯಾಪ್ತಿಯ 260 ಉದ್ಯಾನವಗಳ ಪೈಕಿ ಆರಂಭದಲ್ಲಿ 150 ಉದ್ಯಾನವಗಳಲ್ಲಿ ಗಿಡಗಳನ್ನು ಬೆಳೆಸಲಾಗುತ್ತದೆ. ಕೆಲ ಖಾಸಗಿ ಬಡಾವಣೆಯಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಬಳಸಿಕೊಳ್ಳಬಹುದು ಎಂದರು.

ನಗರಸಭೆ ಉಪಾಧ್ಯಕ್ಷ ಜಿ.ಆನಂದ್​ ಮಾತನಾಡಿ, ವನಮಹೋತ್ಸವ ಎಂದರೆ ಸಸಿ ನೆಡುವುದಷ್ಟೇ ಅಲ್ಲ, ಅವುಗಳ ರಕ್ಷಣೆಯೂ ಹೌದು. ಪರಿಸರ ಸಂರಕ್ಷಣೆಗೆ ನಗರಸಭೆಯಿಂದ ಒಂದು ಉತ್ತಮ ಹೆಜ್ಜೆ ಇಟ್ಟಿದ್ದು, ಸಾರ್ವಜನಿಕರು ಹಾಗೂ ಕೆಲ ಸಂ ಸಂಸ್ಥೆಯವರು ಸಹಕಾರ ನೀಡಬೇಕು ಎಂದು ತಿಳಿಸಿದರು. ವಿದ್ಯುತ್​ ಶಾಖೆ ಅಭಿಯಂತರೆ ಪ್ರಿಯಾ, ಅರಿಶಿಣಕುಂಟೆ ಸ್ಫೋರ್ಟ್ಸ್​ ಅಸೋಸಿಯೇಷನ್​ ಅಧ್ಯಕ್ಷ ಮಂಜುನಾಥ್​, ಕಾರ್ಯದರ್ಶಿ ರಮೇಶ್​, ಸದಸ್ಯರಾದ ಪುಟ್ಟರಾಜು, ಕೆ.ಮಂಜುನಾಥ್​, ಸತೀಶ್​, ಹರೀಶ್​, ಬೈರೇಗೌಡ, ವಿಕಾಸ್​, ಯತೀಶ್​, ಮಂಜು, ಓಂಕಾರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net