

ಚಿಕ್ಕಮಗಳೂರು: ನಾಗರಿಕರು ಮತ್ತು ಮಕ್ಕಳು ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಸುತ್ತಮುತ್ತಲು ಪರಿಸರಕ್ಕೆ ಪೂರಕವಾಗಿರುವ ಸಸಿಗಳನ್ನು ಬೆಳೆಸುವ ಮೂಲಕ ಪ್ರಕೃತಿ ರಕ್ಷಣೆಗೆ ಮುಂದಾಗಬೇಕು ಎಂದು ಬ್ರಹ್ಮ ಕುಮಾರಿ ಭಾಗ್ಯಲಕ್ಷ್ಮೀ ತಿಳಿಸಿದರು.
ನಗರದ ಫ್ರೆÊಡ್ ಯುರೋ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚಾರಣೆ ಅಂಗವಾಗಿ ಅಣುವ್ರತ್ ಸಮಿತಿಯಿಂದ ಸಸಿಗಳನ್ನು ನೆಟ್ಟು ಮಾತನಾಡಿದ ಅವರು, ಮುಂದಿನ ಜನಾಂಗದ ಶ್ರೇಯೋಭಿವೃದ್ಧಿಗೆ ಪರಿಸರನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ನಾಗರಿಕರು ತಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಹೆಮ್ಮರವಾಗಿ ಬೆಳೆಸಿದರೆ ಶುದ್ಧ ಗಾಳಿ ಹಾಗೂ ನೆರಳಿನ ಆಸರೆ ಸಿಕ್ಕಂತಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ಇಂದಿನಿAದಲೇ ಈ ನಿರ್ಧಾರ ವನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಅಣುವ್ರತ್ ಸಮಿತಿಯ ಮಂಜುಳಾಬನ್ಸಾಲಿ ಮಾತನಾಡಿ, ೧೯೭೪ರಲ್ಲಿ ವಿಶ್ವ ಪರಿಸರ ದಿನಾಚರಣೆ ಆರಂಭವಾಗಿ ಇಂದಿನವರೆಗೂ ಆಚರಿಸಲಾಗುತ್ತಿದೆ. ಪರಿಸರ ದಿನಾಚರಣೆಯ ಮೂಲ ಉz್ದೆÃಶವೆಂದರೆ ಮಾಲಿನ್ಯ ತಡೆಗಟ್ಟಿ ಸಮಾಜದಲ್ಲಿ ಸ್ವಚ್ಚಂಧ ಪರಿಸರವನ್ನು ಉಳಿಸುವುದಾಗಿದೆ ಎಂದರು.
ಮನುಷ್ಯ ಕುಲ, ಪ್ರಾಣಿ ಕುಲ ನೆಮ್ಮದಿಯ ಜೀವನವನ್ನು ನಡೆಸಬೇಕಾದರೆ ವನಗಳ ಸಂರಕ್ಷಣೆ ಅಗತ್ಯವಾಗಿದೆ. ಭಾರತ ಸರ್ಕಾರವು ಸಹ ಗಿಡಮರಗಳನ್ನು ಬೆಳೆಸುವಲ್ಲಿ ಶ್ರಮಿಸುತ್ತಿದೆ. ಅಣುವ್ರತ ಸಂಸ್ಥೆಯ ಉz್ದÉÃಶ ಸಹ ಪರ್ಯಾವರಣ, ಮೈತ್ರಿ, ನಶೆ ಮುಕ್ತಿ, ಅಹಿಂಸೆ ಮತ್ತು ಸದ್ಭಾವನೆಯ ಚೇತನವನ್ನು ಜಾಗೃತಗೊಳಿಸುವುದಾಗಿದೆ ಎಂದು ಹೇಳಿದರು.
ಜೈನ್ ಸಂಘದ ಅಧ್ಯಕ್ಷ ಕಾಂತಿಲಾಲ್ ಜೈನ್ ಮಾತನಾಡಿ, ಪರಿಸದ ಬಗ್ಗೆ ಹೆಚ್ಚು ಕಾಳಜಿಯನ್ನು ಹೊಂದಿರುವ ಅಣುವ್ರತ್ ಸಮಿತಿಯು ಮುಂದಿನ ಯುವ ಪೀಳಿಗೆಗೆ ಒಳ್ಳೆಯ ವಾತಾವರಣದ ಜೊತೆಗೆ ಪರಿಶುದ್ದ ಗಾಳಿ ಸಿಗಬೇಕೆಂಬ ಉz್ದÉÃಶದಿಂದ ಪರಿಸದ ಬಗ್ಗೆ ಕಾಳಜಿಯನ್ನು ವಹಿಸುತ್ತಿದೆ. ಇದೇ ರೀತಿಯಲ್ಲಿ ಎಲ್ಲರೂ ಕಾಳಜಿ ವಹಿಸಿ ಗಿಡಮರಗಳನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರು.
ಅಖಿಲ ಕರ್ನಾಟಕ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಚೈತ್ರ.ಎಸ್.ಗೌಡ ಮಾತನಾಡಿ, ಅಣುವ್ರತ್ ಸಮಿತಿಯು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಅದೇ ರೀತಿಯಲ್ಲಿ ಪರಿಸರ ದಿನಾಚಾರಣೆಯ ಅಂಗವಾಗಿ ೫ ಸಾವಿರ ಸಸಿಗಳನ್ನು ಯಶಸ್ವಿಯಾಗಿ ನೆಡುವ ಮೂಲಕ ಅಭಿಯಾನ ಪ್ರಾರಂಭ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯರಾದ ಮಂಜುನಾಥ್, ಅಣುವ್ರತ್ ಸಮಿತಿ ಕಾರ್ಯದರ್ಶಿ ಗೌತಮ್ ಆಚಾ, ಸಭಾಧ್ಯಕ್ಷ ಮಹೇಂದ್ರ ದೋಸಿ, ಕಿಶೋರ್, ಮಾಜಿ ಅಧ್ಯಕ್ಷ ಲಾಲ್‌ಚಂದ್ ಬನ್ಸಾಲ್, ಸುರೇಂದ್ರ, ಸುರೇಶ್ ಆಚಾ, ಸಜ್ಜನ್‌ರಾಜ್, ಫಿರ್ಗಲ್, ಮಧನ್‌ಚಂದ್ ಗಾಧಿಯಾ, ಗುಣವತಿ, ಚಂದ್ರಬಾಯಿ, ಫ್ಯಾನ್ಸಿ ಆಚಾ, ಕೌಶಲ್ಯ ಬಾಯಿ ಉಪಸ್ಥಿತರಿದ್ದರು.