ಪರಿಸರ ಸಂರಕ್ಷಣೆ ಎಲ್ಲರ ಹೊಣೆ

26 Hunasagi 01
ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ವಿಜ್ಞಾನ ಕೂಟ ಕಾರ‍್ಯಕ್ರಮದಲ್ಲಿ ರಾಜ್ಯ ಪರ್ಯಾವರಣ ಸಂರಕ್ಷಣಾ ಸಂಯೋಜಕ ಜಯರಾಮ ಬೊಳ್ಳಾಜೆ ಮಾತನಾಡಿದರು. ಮುಖ್ಯಗುರು ನೀಲಮ್ಮ ನಾಗರಬಟ್ಟ, ಪ್ರಾಣೇಶ ಕುಲಕರ್ಣಿ, ಬಸವರಾಜ ನೀಲಗಾರ, ಅಶೋಕ ಸಜ್ಜನ್, ಭದ್ರಪ್ಪ, ಮೀನಾಕ್ಷಿ, ಬಸವನಗೌಡ ಇತರರಿದ್ದರು.
Published on

ಹುಣಸಗಿ: ಕರೊನಾ ವೇಳೆ ಜಾಗತಿಕ ತಾಪಮಾನದಿಂದ ಬಹಳಷ್ಟು ಸಂಕಷ್ಟ ಅನುಭವಿಸುವಂತಾಯಿತು ಎಂದು ರಾಜ್ಯ ಪರ್ಯಾವರಣ ಸಂರಕ್ಷಣಾ ಸಂಯೋಜಕ, ತಜ್ಞ ಜಯರಾಮ ಬೊಳ್ಳಾಜೆ ಹೇಳಿದರು.

ಬಲಶೆಟ್ಟಿಹಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಇಕೋ ಕ್ಲಬ್ ಸಹಯೋಗದಡಿ ಮಂಗಳವಾರ ಹಮ್ಮಿಕೊಂಡ ವಿಜ್ಞಾನ ಕೂಟ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ನಾವು ಪ್ರಕೃತಿಗೆ ವಿರುದ್ಧವಾಗಿ ಬದುಕುತ್ತಿದ್ದೇವೆ. ವರ್ಷವಿಡೀ ಆಮ್ಲಜನಕ ನೀಡುವ ಗಿಡಗಳನ್ನು ಕಡಿದು ಪರಿಸರ ಹಾಳು ಮಾಡುತ್ತಿರುವುದು ದುರ್ದೈವದ ಸಂಗತಿ. ಸುತ್ತಲಿನ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಮುಖ್ಯಗುರು ನೀಲಮ್ಮ ನಾಗರಬಟ್ಟ ಅಧ್ಯಕ್ಷತೆ ವಹಿಸಿದ್ದರು. ಪ್ರಾಣೇಶ ಕುಲಕರ್ಣಿ, ಬಸವರಾಜ ನೀಲಗಾರ, ಅಶೋಕ ಸಜ್ಜನ್, ಭದ್ರಪ್ಪ, ಮೀನಾಕ್ಷಿ, ಬಸವನಗೌಡ ಇತರರಿದ್ದರು. ವಿಜಯರೆಡ್ಡಿ ಸ್ವಾಗತಿಸಿದರು. ಬಸನಗೌಡ ವಂದಿಸಿದರು.

ಶಿಕ್ಷಕ ವೃಂದ ಹಾಗೂ ೨೦೦ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net