ಪರಿಸರ ಮೂಲತತ್ವ ವಿಚಾರ ಉಪನ್ಯಾಸ

K.V. GURURAJ
Published on

ಧಾರವಾಡ: ‘ಕಪ್ಪೆ ಗುರುರಾಜ’ ಎಂದೇ ಖ್ಯಾತರಾದ ವಿಶ್ವವಿಖ್ಯಾತ ಪ್ರಾಣಿಶಾಸಜ್ಞ ಹಾಗೂ ಸಂಶೋಧಕ ಡಾ. ಕೆ.ವಿ. ಗುರುರಾಜ ಅವರು ‘ಉಭಯವಾಸಿಗಳ ಸಂರಕ್ಷಣೆಯಲ್ಲಿ ನಾಗರಿಕ ವಿಜ್ಞಾನಿಗಳ ಪಾತ್ರ’ ಕುರಿತು ವಿಶೇಷ ಉಪನ್ಯಾಸ ಹಾಗೂ ಕ್ಷೇತ್ರಕಾರ್ಯ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ.

ಸಿದ್ದಲಿಂಗವ್ವ ವಿರೂಪಾಕ್ಷಯ್ಯ ಹಿರೇಮಠ ಹಾಗೂ ಸ್ವಾತಂತ್ರ್ಯ ಸೇನಾನಿ ವಿರೂಪಾಕ್ಷಯ್ಯ ಸಂಗಯ್ಯ ಹಿರೇಮಠ ಅವರ ಹೆಸರಿನಲ್ಲಿ, ನೇಚರ್ ರಿಸರ್ಚ್ ಸೆಂಟರ್ ಹಾಗೂ ಹಳ್ಳಿಗೇರಿಯ ನೇಚರ್ ಸ್ಟ್ ಇಕೋ ವಿಲೇಜ್ ಇಕೋ ಎಜುಕೇಶನ್ ಪಾರ್ಕ್‌ನ ಪರಿಸರ ಮೂಲತತ್ವ ವಿಚಾರೋಪನ್ಯಾಸ ಮಾಸಿಕದ 2ನೇ ಸರಣಿಯ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳುವರು.

ಜು. 22ರಂದು ಸಂಜೆ 6.15ಕ್ಕೆ ನಗರದ ಇನ್‌ಸ್ಟಿಟ್ಯೂಷನ್ ಆ್ ಇಂಜಿನಿಯರ್ಸ್‌ನ ಸರ್ ಎಂ. ವಿಶ್ವೇಶ್ವರಯ್ಯ ಸಭಾಭವನದಲ್ಲಿ ಉಪನ್ಯಾಸ ನೀಡುವರು. ಪ್ರಕೃತಿ ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಪಂಚಾಕ್ಷರಿ ಹಿರೇಮಠ ಅಧ್ಯಕ್ಷತೆ ವಹಿಸುವರು. ಅಂದು ರಾತ್ರಿ 9.30ಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಆವರಣದ ಸಸ್ಯೋದ್ಯಾನದಲ್ಲಿ ಡಾ. ಗುರುರಾಜ ಅವರು ಉಭಯವಾಸಿಗಳ ವೀಕ್ಷಣೆ, ಸಮೀಕ್ಷೆ ಮತ್ತು ದಾಖಲೀಕರಣದ ಕುರಿತು ವಿದ್ಯಾರ್ಥಿಗಳು, ಪರಿಸರ ಕಾರ್ಯಕರ್ತರು ಹಾಗೂ ನಾಗರಿಕ ವಿಜ್ಞಾನಿಗಳಿಗೆ ಕ್ಷೇತ್ರಕಾರ್ಯದ ಮೂಲಕ ಮಾರ್ಗದರ್ಶನ ಮಾಡುವರು.

ಜು. 23ರಂದು ಬೆಳಗ್ಗೆ 6 ಗಂಟೆಗೆ ತಾಲೂಕಿನ ಹಳ್ಳಿಗೇರಿಯ ಇಕೋ ಎಜುಕೇಶನ್ ಪಾರ್ಕ್‌ನ ನೇಚರ್ ಸ್ಟ್ ಇಕೋ ವಿಲೇಜ್‌ನಲ್ಲಿ ಡಾ. ಗುರುರಾಜ್ ಅವರು, ಪರಿಸರದ ಆರೋಗ್ಯ ಸೂಚಕಗಳಾದ ಕಪ್ಪೆಗಳ ಉದ್ಯಾನ (ಬೆಟ್ರಾಕೇರಿಯಮ್) ಸ್ಥಾಪಿಸುವ ಮತ್ತು ಅವುಗಳನ್ನು ಕಾಪಾಡುವ ವಿವಿಧ ಸ್ಥಳೀಯ ಪ್ರಯತ್ನಗಳ ಬಗ್ಗೆ ಕ್ಷೇತ್ರಕಾರ್ಯದ ಮೂಲಕ ವಿವರಿಸುವರು. ಪಕ್ಷಿತಜ್ಞ ಆರ್.ಜಿ. ತಿಮ್ಮಾಪೂರ, ಕಲಾವಿದ ಮಂಜುನಾಥ ಹಿರೇಮಠ, ಜೀವಂತ ಮರಗಳ ಮರುನಾಟಿ ತಜ್ಞ ಅಸ್ಲಂಜಹಾನ್ ಅಬ್ಬೀಹಾಳ ಸಂಯೋಜಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net