

ಮೈಸೂರು: ಮಕ್ಕಳ ದಿನಾಚರಣೆ ಪ್ರಯುಕ್ತ ಎಚ್.ವಿ.ರಾಜೀವ್ ಸ್ನೇಹ ಬಳಗದ ವತಿಯಿಂದ ಕುವೆಂಪುನಗರ ವಿಶ್ವಮಾನವ ಜೋಡಿ ರಸ್ತೆಯ ಸುಮಾ ಸೋಪಾನ ಉದ್ಯಾನವನದಲ್ಲಿ ಸೋಮವಾರ ಮಕ್ಕಳಿಗೆ ಪರಿಸರದ ಬಗ್ಗೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಪರಿಸರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಬಿಲ್ವಪತ್ರೆ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ನಗರದ ನೂರಾರು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಉದ್ಯಮಿ ಶೇಖರ್, ಮಾಜಿ ಮೇಯರ್ ಭೈರಪ್ಪ, ನಗರಪಾಲಿಕೆ ಸದಸ್ಯ ಎಂ.ಸಿ.ರಮೇಶ್, ಪೂರ್ಣಪ್ರಜ್ಞ ವಿದ್ಯಾ ಕೇಂದ್ರ ಶಾಲೆಯ ಅಧ್ಯಕ್ಷ ಲಯನ್ ಜೆ.ಲೋಕೇಶ್, ಕಲಾವಿದ ಮುತ್ತಪ್ಪ, ರಾಜೀವ್ ಸ್ನೇಹ ಬಳಗದ ಸಂಚಾಲಕ ಕುಮಾರ್ ಇದ್ದರು.