ಅಭಿವೃದ್ಧಿ ನೆಪದಲ್ಲಿ ಪರಿಸರ ನಾಶ

gan (3)
Published on

ಕುಂದಾಪುರ: ಈ ಜೀವ ಜಗತ್ತಿನಲ್ಲಿ ವಾನವ ಪರಿಸರವನ್ನು ಹಾಳುಗೆಡವಿದಷ್ಟು ಯಾವುದೇ ಪ್ರಾಣಿ ಪಕ್ಷಿಗಳು ವಾಲಿನ್ಯಗೊಳಿಸಲಿಲ್ಲ. ಅಭಿವೃದ್ಧಿ ನಮ್ಮ ಬದುಕಿಗೆ ಎಷ್ಟು ಪೂರಕವೋ ಪರಿಸರಕ್ಕೆ ಅಷ್ಟೇ ವಾರಕ ಎಂದು ಪ್ರಗತಿಪರ ಕೃಷಿಕ ಪ್ರಕಾಶ್ ಹಾಲಾಡಿ ಹೇಳಿದರು.

ಕಂಡ್ಲೂರು ರಾಮ್ಸನ್ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಹಾಗೂ ಪ್ರೇರಣಾ ಇಕೋ ಕ್ಲಬ್ ಆಶ್ರಯದಲ್ಲಿ ಜರುಗಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯಶಿಕ್ಷಕ ಗೋಪಾಲ್ ವಿಷ್ಣು ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೇರಣಾ ಇಕೋ ಕ್ಲಬ್‌ನ ಕಾರ್ಯನಿರ್ವಾಹಕ, ಶಿಕ್ಷಕ ರಜನಿ ಎಸ್.ಹೆಗಡೆ ಪರಿಸರ ಸಂರಕ್ಷಣೆ ಮಹತ್ವ ತಿಳಿಸಿದರು.

ಕೃಷಿ ಮೇಲ್ವಿಚಾರಕ ಸಂಜು ಕಳ್ಳಿಮನೆ, ಸೇವಾ ಪ್ರತಿನಿಧಿ ಪ್ರೇವಾ, ಶಿಕ್ಷಕರಾದ ಅಜಯ್ ಕುವಾರ್ ಶೆಟ್ಟಿ, ನಿತ್ಯಾನಂದ ಶೆಟ್ಟಿ ಹಳ್ನಾಡು, ಅಣ್ಣಪ್ಪ ಎಂ.ಗೌಡ, ರಜನಿ ಹೆಗಡೆ, ಜ್ಯೋತಿ, ಸಂತೋಷ್, ರತ್ನಾ, ಲಕ್ಷ್ಮೀ ಎ.ಶೆಟ್ಟಿ, ಅಶ್ವಿನಿ ಉಪಸ್ಥಿತರಿದ್ದರು. ಸಂಜು ಕಳ್ಳಿಮನೆ ಸ್ವಾಗತಿಸಿದರು. ಸಹ ಶಿಕ್ಷಕ ಸಂತೋಷ್ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net