ಗಣಿಗಾರಿಕೆಗೆ ಅನುಮತಿ ನೀಡದರೆ ಪರಿಸರ ನಾಶ

Published on

ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಆತಂಕ

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ದೊಡ್ಡಶೆಟ್ಟಿಕೆರೆಯಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದರೆ ಸುತ್ತಮುತ್ತಲ ಪರಿಸರ ನಾಶವಾಗಲಿದೆ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಮಾಯಸಂದ್ರ ಗ್ರಾಪಂ ಮುಂಭಾಗ ದೊಡ್ಡಶೆಟ್ಟಿಕೆರೆ ಮತ್ತು ಅಕ್ಕಪಕ್ಕದ ಹಳ್ಳಿಯ ಗ್ರಾಮಸ್ಥರು ಕಲ್ಲು ಗಣಿಗಾರಿಕೆ ಅನುಮತಿ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಶ್ರೀಗಳು, ಗಣಿಗಾರಿಕೆ ಗುರುತಿಸಿರುವ ಪ್ರದೇಶದ ಸಮೀಪವೇ ಇತಿಹಾಸ ಪ್ರಸಿದ್ಧ ಶತಮಾನದ ಶ್ರೀರಂಗನಾಥಸ್ವಾಮಿ ಬೆಟ್ಟ, ಶ್ರೀ ಆದಿಚುಂಚನಗಿರಿ ೇತ್ರ ಮತ್ತು ಜೋಡುಗಟ್ಟೆ ಮಹದೇಶ್ವರಸ್ವಾಮಿ ದೇವಾಲಯ ಸೇರಿದಂತೆ ಆದಿಚುಂಚನಗಿರಿಯ ರಾಷ್ಟ್ರೀಯ ಮಟ್ಟದ ನವಿಲುಧಾಮವಿದೆ. ಅನೇಕ ರೈತರು ತಮ್ಮ ಜಮೀನುಗಳಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದರೆ ಪರಿಸರ ನಾಶದ ಜತೆಗೆ ಇತಿಹಾಸ ಪ್ರಸಿದ್ಧ ದೇವಾಲಯಗಳು, ರೈತರಿಗೆ, ಗ್ರಾಮಸ್ಥರಿಗೆ ಸಮಸ್ಯೆಯಾಗಲಿದೆ. ಕೂಡಲೇ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಬಾರದೆಂದು ಆಗ್ರಹಿಸಿದರು.

ನಿವೃತ ವಾಯು ಸೇನೆ ಸೇನಾನಿ ಡಿ.ತಿಪ್ಪಣ್ಣ ಮಾತನಾಡಿ, ದೊಡ್ಡ ಶೆಟ್ಟಿಕೆರೆ ಕಲ್ಲುಗಣಿಗಾರಿಕೆಗೆ ನಾವುಗಳು 2014ರಿಂದ ಸತತವಾಗಿ ವಿವಿಧ ಹಂತಗಳಲ್ಲಿ ವಿರೋಧಿಸುತ್ತಿದ್ದೇವೆ. ಆದರೂ ಕೆಲವು ಉದ್ಯಮಿಗಳು ಸರ್ಕಾರದ ಮೇಲೆ ಒತ್ತಡ ಮತ್ತು ಪ್ರಭಾವ ಬೀರಿ ಗಣಿಗಾರಿಕೆಗೆ ಮಂಜೂರು ಪಡೆಯಲು ಮುಂದಾಗಿದ್ದಾರೆ. ಇದರಿಂದ ಅಕ್ಕಪಕ್ಕದ ಹಳ್ಳಿಯ ಗ್ರಾಮಸ್ಥರು ಆತಂಕಗೊಂಡು ಎಲ್ಲ ಹೋರಾಟಕ್ಕೂ ಸಿದ್ಧರಾಗಿದ್ದಾರೆ. ಗ್ರಾಮಸ್ಥರ ಅನ್ನವನ್ನು ಕಿತ್ತುಕೊಳ್ಳುವ ಕೆಲಸ ಆಗುತ್ತಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.

ಜಿಪಂ ಮಾಜಿ ಉಪಾಧ್ಯ ಚೌದ್ರಿ ಟಿ.ರಂಗಪ್ಪ ಮಾತನಾಡಿ, ಗಣಿಗಾರಿಕೆಯ ಮಾಲೀಕರು ಅದೆಷ್ಟೇ ಪ್ರಭಾವಿಗಳಾದರೂ ಸರಿಯೇ ನಾವುಗಳು ಗಣಿಗಾರಿಕೆಗೆ ಬಿಡುವುದಿಲ್ಲ. ಈಗಾಗಲೇ ಗಣಿಗಾರಿಕೆ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ, ಭೂ ಮತ್ತು ಗಡಿ ಇಲಾಖೆಗೆ ಗಣಿಗಾರಿಕೆ ವಿರೋಧಿಸಿ ಮನವಿ ನೀಡಿದ್ದೇವೆ. ಮುಂದೆ ಕಾನೂನು ಹೋರಾಟಕ್ಕೂ ಸಹ ಸಜ್ಜಾಗಿದ್ದೇವೆ ಎಂದು ಎಚ್ಚರಿಸಿ ತಹಸೀಲ್ದಾರ್​ ಕುಂ.ಜಿ.ಅಹ್ಮದ್​ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್​ ಕುಂ.ಜಿ.ಅಹಮದ್​, ಗಣಿಗಾರಿಕೆಗೆ ಅಧಿಕೃತವಾಗಿ ಯಾವುದೇ ಮಂಜೂರು ಇದುವರೆಗೂ ಆಗಿಲ್ಲ. ಈಗಾಗಲೇ ಗ್ರಾಮಸ್ಥರ ಆೇಪಣೆ ಕುರಿತಾಗಿ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ವರದಿ ಸಲ್ಲಿಸಿದ್ದೇನೆ. ಈ ಪ್ರತಿಭಟನೆಯ ಮನವಿಯನ್ನು ಡಿಸಿಗೆ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಚ್​.ಪಿ.ನಂಜೇಗೌಡ, ಗ್ರಾಪಂ ಮಾಜಿ ಅಧ್ಯರಾದ ರಂಗಸ್ವಾಮಿ, ಸವಿತಾ ಶಿವಕುಮಾರ್​, ಗ್ರಾಮಸ್ಥರಾದ ಮುರುಳಿ ದಾಸ್​. ಶ್ರೀರಂಗ ಕಮಿಟಿ ಅಧ್ಯರಾದ ಅಶೋಕ್​. ಕಾರ್ಯದರ್ಶಿ ರಂಗನಾಥ್​, ಹಾಲು ಉತ್ಪಾದಕರ ಮಹಿಳಾ ಸಂದ ಅಧ್ಯೆ ಪ್ರೇಮಕುಮಾರಿ, ಗ್ರಾಪಂ ಅಧ್ಯರಾದ ಚಂದ್ರ. ಪಿಎಸ್​ಐ ಮೂರ್ತಿ, ಪಿಡಿಒ ಸುರೇಶ್​ ಸೇರಿದಂತೆ ಸುತ್ತಮುತ್ತ ಹಳ್ಳಿಯ ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net