

ಶಿರಹಟ್ಟಿ ಗಿಡಮರಗಳ ರಕ್ಷಣೆಯಿಂದ ಪರಿಸರದ ಉಳಿವು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಇದರಿಂದ ಪರಿಸರಕ್ಕೆ ಹಾನಿಯಾಗಿ ಮನುಷ್ಯರ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ವಲಯ ಅರಣ್ಯ ಇಲಾಖೆ ಅಧಿಕಾರಿ ರಾಮಪ್ಪ ಪೂಜಾರ ಹೇಳಿದರು.
ತಾಲೂಕಿನ ಕಪ್ಪತ್ತಗುಡ್ಡದ ದೈವಿವನದಲ್ಲಿ ಭಾರತ ಸ್ಕೌಟ್ಸ್ -ಗೈಡ್ಸ್ ಸಂಸ್ಥೆ, ಶಿಕ್ಷಣ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ 69 ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಇಒ ಜಿ.ಎಂ.ಮುಂದಿನಮನಿ ಮಾತನಾಡಿ, ಪರಿಸರ ಉಳಿಸಿ ಬೆಳೆಸಿದರೆ ಮಾತ್ರ ಮಾನವ ಕುಲ ಬದುಕುಳಿಯಲು ಸಾಧ್ಯ ಎಂದರು.
ಉಪ ವಲಯ ಅರಣ್ಯ ಸರಂಕ್ಷಣಾಧಿಕಾರಿ ಸಂಗಮೇಶ ನೀರಲಗಿ, ಭಾರತ ಸ್ಕೌಟ್ಸ್, ಗೈಡ್ಸ್ ಸಂಸ್ಥೆ ತಾಲೂಕು ವಲಯದ ಕಾರ್ಯದರ್ಶಿ ಕೆ.ಆರ್. ಲಮಾಣಿ, ಎಂ.ಎ. ಬುಕೀಟಗಾರ, ಗಿರೀಶ ಸಜ್ಜನರ ಹಾಗೂ ಶಿರಹಟ್ಟಿ,ಲಕ್ಷ್ಮೇಶ್ವರ ತಾಲೂಕಿನ ಸ್ಕೌಟ್ಸ್-ಗೈಡ್ಸ್ ಶಿಕ್ಷಕರು ಇದ್ದರು.